ನಮ್ಮ ಹಿಂದೂ ಧರ್ಮದಲ್ಲಿ ಉಪವಾಸದ ಆಚರಣೆ ಅನಾದಿ ಕಾಲದಿಂದಲೂ ಆಚರಣೆಯಲ್ಲಿದೆ.ಕೆಲವು ಪೂಜೆ ವ್ರತ ಹಾಗು ಧಾರ್ಮಿಕ ಕಾರ್ಯಗಳಲ್ಲಿ ಇದು ಕಡ್ಡಾಯ ಆಗಿದೆ.
ಮಿಕ್ಕಂತೆ ಕೆಲವು ವ್ರತ,ಕಥೆ, ಪೂಜೆ, ಇತ್ಯಾದಿ ಶುಭ ಹಾಗು ಕೆಲವೊಮ್ಮೆ ಅಪರ ಕಾರ್ಯಗಳಲ್ಲಿ ಉಪವಾಸ ಕಟ್ಟುನಿಟ್ಟು.
ನಮ್ಮ ಮನೆಗಳಲ್ಲಿ ಹಿಂದೆಲ್ಲ ಏಕಾದಶಿ, ಗುರುವಾರ ರಾಯರ ಕೃಪೆಗೆ, ಶನಿವಾರ ಮನೆ ದೇವರು ವೆಂಕಟೇಶ್ವರ ಆದರೆ, ಸೋಮವಾರ ಶಿವನ ಕೃಪೆಗೆ ಮಾಡುತ್ತಿದ್ದರು.ಮುತ್ತೈದೆಯರು ಉಪವಾಸ ಮಾಡಲೇ ಬಾರದು ಎಂದಿದೆ.ಶುಕ್ರವಾರ , ಮಂಗಳವಾರ ಪ್ರತ್ಯೇಕವಾಗಿ ಉಪವಾಸ ಮಾಡುವವರು ಇರುವರು.ನಾಗರ ಪ್ರತಿಷ್ಠೆ ಮಾಡಿದವರು ಪ್ರತಿ ಷಷ್ಠಿ ಉಪವಾಸ ಮಾಡುವರು.
ಉಪವಾಸವನ್ನು ಒಪ್ಪೊತ್ತು ಎಂದು ಕೂಡಾ ಹೇಳುವರು.ಅಂದರೆ ಈ ದಿನ ಒಂದು ಹೊತ್ತು ಊಟ ಮಾಡಿ ರಾತ್ರಿಗೆ ಫಲಾಹಾರ ಸೇವಿಸುವರು.ಫಲಾಹಾರ ಎಂದರೆ ಬರೀ ಹಣ್ಣು ಹಾಲು ಎಂದೇನಿಲ್ಲ.ಮುಸುರೆ ಅಲ್ಲದ ಅಂದರೆ ಬೇಯಿಸದ ಪದಾರ್ಥ ಸೇವಿಸಬಹುದು.ಸಾಮಾನ್ಯವಾಗಿ ಅಕ್ಕಿಯ ಪದಾರ್ಥದ ಬದಲಿಗೆ ಗೋಧಿಯ ಪದಾರ್ಥ ಸೇವಿಸುವರು.ಅಂದರೆ ಗೋಧಿಯ ಚಪಾತಿ, ಗೋಧಿಯ ರವೆಯ ಉಪ್ಪಿಟ್ಟು.ಮಡಿಯಲ್ಲಿ ಕುಟ್ಟಿದ ಅವಲಕ್ಕಿ, ಮೊಸರವಲಕ್ಕಿ, ಗೊಜ್ಜವಲಕ್ಕಿ, ಬೇಳೆಗಳ ಕೋಸಂಬರಿ, ಹಣ್ಣಿನ ಪಾನಕ, ಎಳನೀರು,ಇತ್ಯಾದಿ ಹಣ್ಣು ಹಾಲು ಜೊತೆಗೆ ಸೇವಿಸುವರು.
ಶ್ರಾವಣದಲ್ಲಿ ಸೋಮವಾರ, ಶನಿವಾರ ಹಾಗು ಕಾರ್ತಿಕದಲ್ಲಿ ಸೋಮವಾರ ಉಪವಾಸ ಕೆಲವರು ಇರುವರು.ಕೆಲವರು ಶಿವರಾತ್ರಿ ಫೂರಾ ದಿನ ಊಟ ಇಲ್ಲದೆ ಫಲಾಹಾರ ಸೇವಿಸುತ್ತಾರೆ.ಕೆಲವರು ವೈಕುಂಠ ಏಕಾದಶಿಯಂದು ಫೂರಾ ಫಲಾಹಾರ ಸೇವಿಸುವರು.ರಾಮನವಮಿ, ಗೋಕುಲಾಷ್ಟಮಿ, ನರಸಿಂಹ ಜಯಂತಿಎನ್ದು ಫಲಾಹಾರ ಸೇವಿಸುವರು.
ಅಪರ ಕರ್ಮಗಳ ದಿನ ಹಾಗು ಹಿಂದಿನ ದಿನ ರಾತ್ರಿ ಫಲಾಹಾರ ಸೇವಿಸುವರು.ಆದರೆ ಅಪರ ಕರ್ಮದ ದಿನ ಹಾಲಿನ ಸೇವನೆ ನಿಷಿದ್ಧ.
ಆದರೆ ಈ ಉಪವಾಸದಿಂದ ಚಿಕ್ಕ ಮಕ್ಕಳು, ಗರ್ಭಿಣಿ ಸ್ತ್ರೀಯರು, ರೋಗಿಗಳು, ನಿಷ್ಯಕ್ತರು, ಮುದುಕರು ಹೊರತಾಗಿರುತ್ತಾರೆ.
ಸುಬ್ರಹ್ಮಣ್ಯ ಷಷ್ಠಿ ಆಚರಣೆ ಇರುವವರು ಅಂದು ಫಲಾಹಾರ ರಾತ್ರಿಗೆ ಸೇವಿಸುವರು.ಹೆಣ್ಣು ದೇವರ ಭಕ್ತರು ಕೆಲವರು ಶುಕ್ರವಾರ, ಮಂಗಳವಾರ ಒಪ್ಪೋತ್ತು ಮಾಡುವರು.ಆದರೆ ಈ ದಿನ ನಿಟ್ಟುಪಾವಾಸ ಅಂದರೆ ಏನು ತಿನ್ನದೇ ಇರುವುದು, ಅನುಸರಿಸುವುದಿಲ್ಲ.ಸಾಮಾನ್ಯವಾಗಿ ಮುತ್ತೈದೆಯರು ನಿಟ್ಟು ಪವಾಸ ಮಾಡುವುದಿಲ್ಲ
ವೈಜ್ಞಾನಿಕವಾಗಿ ಉಪವಾಸ ನಮ್ಮ ದೇಹಕ್ಕೆ ಒಳ್ಳೆಯದು.ಫಲಾಹಾರ ಹಾಗು ಬೇಯಿಸದ ಆಹಾರ ಸೇವನೆಯು ದೇಹಕ್ಕೆ ಹಿತ.
ಹಿಂದೆಲ್ಲ ವಿಧವೆಯರು ಒಪ್ಪೋತ್ತು ಆಚರಿಸುವುದು ಇತ್ತು.ಈಗ ಕಾಲ ಹಾಗೇನಿಲ್ಲ.ಬದಲಾಗಿದೆ.
ಬನ್ನಿ ಓದುಗರೇ ನಾವು ಕೂಡ ವಾರಕ್ಕೊಮ್ಮೆ ಉಪವಾಸ ವ್ರತ ಹಿಡಿಯೋಣ
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com