ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ 'ಮಾನ್ವಿಯ ಮುನಿಪುಂಗವ' ಶ್ರೀ ಜಗನ್ನಾಥದಾಸರ ಆರಾಧನೆಯ ಪ್ರಯುಕ್ತ ಸೆಪ್ಟೆಂಬರ್12 , ಗುರುವಾರ ಸಂಜೆ 6-30ಕ್ಕೆ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಅವರು "ರಂಗ ಒಲಿದ ದಾಸರಾಯ" ಎಂಬ ಶೀರ್ಷಿಕೆಯಲ್ಲಿ ಜಗನ್ನಾಥದಾಸರನ್ನು ಕುರಿತ ಕೃತಿಗಳನ್ನೂ ಹಾಗೂ ಶ್ರೀ ಜಗನ್ನಾಥದಾಸರು ರಚಿಸಿರುವ ಕೃತಿಗಳನ್ನೂ ಪ್ರಸ್ತುತಪಡಿಸಲಿದ್ದಾರೆ.
ವಾದ್ಯಸಹಕಾರ : ಶ್ರೀ ಬಿ. ಆರ್. ಪ್ರಕಾಶ್ (ಕೀ-ಬೋರ್ಡ್), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).
ಈ ಮೇಲ್ಕಂಡ ವಿಶೇಷ ಕಾರ್ಯಕ್ರಮದಲ್ಲಿ ದಾಸಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಮಠದ ಗೌರವ ಅಧ್ಯಕ್ಷರಾದ ಡಾ|| ಸುಧೀಂದ್ರಕುಮಾರ್ ವಿನಂತಿಸಿದ್ದಾರೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೆಂಗೇರಿ ಉಪನಗರ, ಬೆಂಗಳೂರು