ನೃತ್ಯ ಕುಟೀರ ನೃತ್ಯ ಶಾಲೆಯ 20ನೇ ವಾರ್ಷಿಕೋತ್ಸವ

VK NEWS
By -
0

ಬೆಂಗಳೂರಿನ ನೃತ್ಯ ಕುಟೀರ ನೃತ್ಯ ಶಾಲೆಯ 20ನೇ  ವಾರ್ಷಿಕೋತ್ಸವ

 ಕಿರಿಯ ವಿಭಾಗದಲ್ಲಿ "ನೃತ್ಯ ವಿಂಶತಿ" ಎಂಬ ಶೀರ್ಷಿಕೆ ಅಡಿಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಅತ್ಯಂತ ಸಂಭ್ರಮದಿಂದ ನಡೆಯಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ವಿದುಷಿ ಶ್ರೀಮತಿ ಉಷಾ ಬಸಪ್ಪ ಹಾಗೂ ಪ್ರಸಾದನ ಕಲಾವಿದರು ಹಾಗೂ ಕಲಾ ನಿರ್ದೇಶಕರಾದ ಶ್ರೀ ವಿಜಯ ಬೆಣಚ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. 








ನೃತ್ಯ ಕುಠೀರದ ಗುರು ವಿದುಷಿ ದೀಪಾವಳಿ ಹಾಗೂ ಅವರ ಗರಡಿಯಲ್ಲಿ ಪಳಗಿದ ಹಿರಿಯ ಶಿಷ್ಯರು ಕಲಿಸಿದ  ಸಂಗೀತ,  ಜಾನಪದ ನೃತ್ಯ,  ಕೋಲಾಟ ವಿವಿಧ ಕೃತಿಗಳಿಗೆ ಭರತನಾಟ್ಯಗಳನ್ನು ಸುಮಾರು 150ಕ್ಕೂ ಹೆಚ್ಚಿನ ಕಿರಿಯ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯಕ್ಕೆ ಪೂರಕವಾದ ವೇಷಭೂಷಣಗಳೊಂದಿಗೆ ಸಾಮೂಹಿಕ ನೃತ್ಯಗಳನ್ನು ಅಚ್ಚುಕಟ್ಟಾಗಿ, ಅಗತ್ಯವಾದ ಬೆಳಕು ಸಂಯೋಜನೆಯಲ್ಲಿ ತುಂಬಿದ ಪ್ರೇಕ್ಷಕರ ಮುಂದೆ ಪ್ರದರ್ಶಿಸಿದರು .  

ಕಲಾ ರಸಿಕರಿಗೆ ಕಣ್ತುಂಬ ನೃತ್ಯಾಮೋದ ಹಾಗೂ ಮನ: ತುಂಬಾ  ನೃತ್ಯೋಲಾಸ ಉಣಪಡಿಸಿದ ಸಾರ್ಥಕತೆಗೆ ನೃತ್ಯ ಕುಟೀರ ಸಾಕ್ಷಿಯಾಯಿತು. ಇದೇ ಸಂದರ್ಭದಲ್ಲಿ 2024 ಜನವರಿಯಲ್ಲಿ  ನವದೆಹಲಿಯಲ್ಲಿ ನಡೆದ  ಗಣರಾಜ್ಯೋತ್ಸವ ಪೆರೇಡಲ್ಲಿ  "ನಾರಿ ಶಕ್ತಿ" ಎಂಬ ಅದ್ಭುತ ಸಂಯೋಜನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರನ್ನು ಗಣ್ಯರು ಸನ್ಮಾನಿಸಿದರು.

Post a Comment

0Comments

Post a Comment (0)