ಗೋಕುಲಾಷ್ಟಮಿ ವಿಶೇಷ ಮತ್ತು ವಿಶೇಷತೆ

VK NEWS
By -
0

ಶ್ರಾವಣ ಬಹುಳ ಅಷ್ಟಮಿ ಗೋಕುಲಾಷ್ಟಮಿ.ಶ್ರೀ ಕೃಷ್ಣ ಜನ್ಮಾಷ್ಟಮಿ.ಇದು ದೊಡ್ಡ ಹಬ್ಬ. ಈ ಹಬ್ಬವನ್ನು ಎಲ್ಲ ಜಾತಿ, ಉಪಜಾತಿ ಜನರು ವಿದವಿಧವಾಗಿ ಆಚರಿಸಿ ಸಂತೋಷ ಪಡುವರು.ಶ್ರೀ ಕೃಷ್ಣ ಜನಿಸಿದ ದಿನ ಇದು.ಕೆಲವರು ಚಾಂದ್ರಮಾನ ರೀತ್ಯಾ ಆಚರಿಸಿದರೆ, ಕೆಲವರು ಸೌರಮಾನ ರೀತ್ಯಾ ಆಚರಿಸುವರು.ಕೆಲವರು ಅಷ್ಟಮಿ ತಿಥಿ ಇದ್ದಾಗ ಆಚರಿಸಿದರೆ ಕೆಲವರು ರೋಹಿಣಿ ನಕ್ಷತ್ರ ಇದ್ದಾಗ ಆಚರಿಸುವರು.ಕೆಲವರು ಒಪ್ಪಒತ್ತು ಆಚರಿಸಿದರೆ ಕೆಲವರು ಹಬ್ಬದಡುಗೆ ಮಾಡುವರು.





ಈ ಹಬ್ಬದ ದಿನ ಬೆಳಿಗ್ಗೆ ಮಂಗಳಸ್ನಾನ ಮಾಡಿ, ಮಡಿ ವಸ್ತ್ರ ಧರಿಸಿ ಅಂಬೆಗಾಲು ಕೃಷ್ಣನನ್ನು ತೊಟ್ಟಿಲಿನಲ್ಲಿ ಇಟ್ಟು ಷೋಡಶೋಪಚಾರ ಪೂಜೆ ಮಾಡುವರು.ಕೆಲವರು ಮನೆಯ ಮುಂಬಾಗಿಲು ಇಂದ ಪೂಜಾ ಸ್ಥಳದ ವರೆಗೆ ಬಾಲ ಕೃಷ್ಣನ ಹೆಜ್ಜೆ ಗುರುತುಗಳನ್ನು ಬರೆಯುವರು.ಪೂಜೆ ಮಾಡುವಾಗ ತೊಟ್ಟಿಲು ತೂಗುವರು.

ಈ ದಿನ ಉಪವಾಸ ಅಂದರೆ ಹಣ್ಣು ಹಾಲು, ತಿಂದು ರಾತ್ರಿಗೆ ಮುಸುರೆ ಇಲ್ಲದ ಅಂದರೆ ಬೇಯಿಸದ ಆಹಾರ ತೆಗೆದುಕೊಳ್ಳುತ್ತಾರೆ.

 ಸಾಮಾನ್ಯವಾಗಿ ನವ ವಧುವಿಗೆ ಮದುವೆಯ ಸಮಯದಲ್ಲಿ ಬೆಳ್ಳಿಯ ಅಂಬೆಗಾಲು ಕೃಷ್ಣ ಹಾಗು ಬೆಳ್ಳಿಯ ತೊಟ್ಟಿಲನ್ನು ತವರು ಮನೆಯವರು ನೀಡಿರುತ್ತಾರೆ.

 ಶ್ರೀ ಕೃಷ್ಣ ನೈವೇದ್ಯಕ್ಕೆ ತರಹೇವಾರಿ ಕುರುಕಲು ತಿಂಡಿ, ಬೆಣ್ಣೆ, ತುಪ್ಪ ಉಪಯೋಗಿಸಿ ಮಾಡುವರು.ಶ್ರೀ ಕೃಷ್ಣನ ಪ್ರಿಯವಾದ ಅವಲಕ್ಕಿ, ಮೊಸರು,ಹಾಲು, ಹಣ್ಣುಗಳು,ಕೋಸುಂಬರಿ,ಪಾನಕ ಇತ್ಯಾದಿ ಜೊತೆಗೆ ಇಡುವರು.ಸಿಹಿ ಹಾಗು ಖಾರದ ಬಗೆ ಬಗೆಯ ತಿಂಡಿಗಳನ್ನು ಮಾಡುವರು.ಅಂದು ಶ್ರೀಕೃಷ್ಣನ ಪ್ರಸವದ ನೆನಪಾಗಿ ಬಾಣಂತಿಯರಿಗೆ ಕೊಡುವ ಶುಂಠಿ ತಯಾರಿಸುವರು.ಅಂದರೆ ಒಣ ಶುನ್ಟಿ ಪುಡಿಗೆ ಬೆಲ್ಲ, ತುಪ್ಪ ಸೇರಿಸಿ ಮಿಕ್ಸ್ ಮಾಡಿ.ಅದನ್ನು ಮನೆ ಮಂದಿಯೆಲ್ಲ ಪ್ರಸಾದ ಎಂದು ಸ್ವೀಕರಿಸುವ ವಾಡಿಕೆ ಕೆಲ ಮನೆಗಳಲ್ಲಿ ಉಂಟು.

ಸಂಜೆ ಕೃಷ್ಣನಿಗೆ ಆರತಿ ಮಾಡಿ ಎಲ್ಲರಿಗೂ ನೈವೇದ್ಯ ಮಾಡಿದ ಕುರುಕಲು ತಿಂಡಿಗಳನ್ನು ಹಂಚುವ ಪದ್ಧತಿ ಇದೆ.ದೂರದ ಬಂಧು,ಸ್ನೇಹಿತರುಗಳಿಗೆ ಕೂಡಾ ನಂತರ ಎಲ್ಲ ತಿಂಡಿಗಳನ್ನು ತಲುಪಿಸುತ್ತಾರೆ.

 ಅಯ್ಯಂಗಾರ್ ಜನರು ಈ ಹಬ್ಬ ಬಹಳ ವಿಜೃಂಭನೇಯಿಂದ ಆಚರಿಸುವುದು ಎಲ್ಲರಿಗೂ ತಿಳಿದ ವಿಷಯ.ಶ್ರೀಕೃಷ್ಣನ ಹುಟ್ಟು ಒಂದು ಕಾರಣಜನ್ಮ.ಹಾಗಾಗಿ ದೇವನಾದ ಅವನ ಜನ್ಮ ದಿನವನ್ನು ಸಡಗರದಿನ್ದ ಆಚರಿಸೋಣ.

 ವೈಚಾರಿಕವಾಗಿ ಈ ಹಬ್ಬ ಮಕ್ಕಳಿಗಾಗಿ ಇರುವಂತಿದೆ. ಈ ದಿನ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂತಸ ಪಡುವರು.ಕೆಲವು ಕಡೆ ಕೃಷ್ಣ ವೇಷ ಸ್ಪರ್ಧೆ ಕೂಡಾ ಇರುತ್ತದೆ.

ಅಂದು ಬೇಯಿಸದ ಆಹಾರ ಸೇವಿಸುವುದು, ಉಪವಾಸ ಇದ್ದು, ಹಣ್ಣು ಹಾಲು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ವಿಷಯ ಆಗಿವೆ.

ಚಿಕ್ಕ. ಮಕ್ಕಳು, ಗರ್ಭಿಣಿ ಸ್ತ್ರೀಯರು, ರೋಗಿಗಳು, ವೃದ್ಧರು ಉಪವಾಸದಿಂದ ಹೊರತು.

ಈ ದಿನ ಕೃಷ್ಣನ ಹಾಗು ತೊಟ್ಟಿಲಿನ ರಂಗೋಲಿ ಕೂಡ ಹಾಕುತ್ತಾರೆ.

 ರಾಧಿಕಾ ಜಿ.ಎನ್

ಟೀವೀ ಹೋಸ್ಟ್ 

7019990492

ಈ ಲೇಖನ ಸ್ಮಾರ್ತ, ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಜನರ ಆಚರಣೆ ತಿಳಿಸುತ್ತದೆ.ಉಳಿದಂತೆ ಪ್ರತಿ ಮನೆ ಪೂರ್ವಿಕರ ಸಂಪ್ರದಾಯದಂತೆ ಈ ಹಬ್ಬದ ಆಚರಣೆ ಇರುತ್ತದೆ.

Post a Comment

0Comments

Post a Comment (0)