ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್ ರವರ ಹುಟ್ಟುಹಬ್ಬ

VK NEWS
By -
0

 *ಹೆಮ್ಮಿಗೇಪುರ ವಾರ್ಡ್ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್ ರವರ ಹುಟ್ಟುಹಬ್ಬದ ಸಂಭ್ರಮಾಚರಣೆ...





ಯಶವಂತಪುರ ವಿಧಾನಸಭಾ ಕ್ಷೇತ್ರ, ಹೆಮ್ಮಿಗೇಪುರ ವಾರ್ಡ್: ತಲ್ಲಘಟ್ಟಪುರದಲ್ಲಿ ಮಾಜಿ ಪಾಲಿಕೆ ಸದಸ್ಯರ ಜನಸಂಪರ್ಕ ಕಛೇರಿಯಲ್ಲಿ ಶ್ರೀ ಆರ್ಯ ಶ್ರೀನಿವಾಸ್ ಅಭಿಮಾನಿಗಳ ಬಳಗದ ವತಿಯಿಂದ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್ ರವರ ಹುಟ್ಟುಹಬ್ಬದ ಅಚರಣೆ ಆಯೋಜಿಸಿದ್ದರು.

ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್ ರವರು ಮತ್ತು ಶ್ರೀಮತಿ ಸಿಂಧೂ ಆರ್ಯ ಶ್ರೀನಿವಾಸ್ ರವರು ಕೇಕ್ ಕಟ್ ಮಾಡಿ ಅಭಿಮಾನಿಗಳು, ಸ್ನೇಹಿತರುಗಳಿಗೆ ಸಿಹಿ ವಿತರಿಸಿದರು.

ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಹನುಮಂತೇಗೌಡರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅರುಣ್ ಕುಮಾರ್,  ಸಾರ್ವಜನಿಕರು, ಸಂಘ, ಸಂಸ್ಥೆಗಳು ಹಾಗೂ ರಾಜಕೀಯ ಮುಖಂಡರುಗಳು ಆರ್ಯ ಶ್ರೀನಿವಾಸ್ ರವರನ್ನು ಆತ್ಮೀಯವಾಗಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ *ಆರ್ಯ ಶ್ರೀನಿವಾಸ್ ರವರು* ಮಾತನಾಡಿ ತಂದೆ, ತಾಯಿಯ ಆಶೀರ್ವಾದ ಮತ್ತು ನನ್ನ ರಾಜಕೀಯ ಗುರುಗಳು, ಮಾರ್ಗದರ್ಶಕರಾದ ಎಸ್.ಟಿ.ಸೋಮಶೇಖರ್ ಗೌಡ್ರರ ನೇತೃತ್ವದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ.

ಹೆಮ್ಮಿಗೇಪುರ ವಾರ್ಡ್ ಜನರ ಸಹಕಾರದಿಂದ ಬಿಬಿಎಂಪಿ ಸದಸ್ಯನಾಗಿ ಜನಸೇವೆ ಮಾಡುವ ಅವಕಾಶ ಕೊಟ್ಟರು.

ಬೆಂಗಳೂರುನಗರ ಪ್ರದೇಶಕ್ಕೆ ಹೊಸದಾಗಿ ಹೆಮ್ಮಿಗೇಪುರ ವಾರ್ಡ್ ಸೇರ್ಪಡೆಯಾಯಿತು, ನೂತನ ವಾರ್ಡ್ ನಲ್ಲಿ ಹಲವಾರು ಸಮಸ್ಯೆ ಇತ್ತು.

ಮಾಜಿ ಸಚಿವರು, ಶಾಸಕರಾದ ಎಸ್.ಟಿ.ಸೋಮಶೇಖರ್ ಗೌಡ್ರರು ಮತ್ತು ವಾರ್ಡ್ ನಾಗರಿಕರ ಸಹಕಾರದಿಂದ ಹೆಮ್ಮಿಗೇಪುರ ವಾರ್ಡ್ ಮಾದರಿ ವಾರ್ಡ್ ಆಗಿ ರೂಪಿಸಲಾಗಿದೆ.

ಉತ್ತಮ ರಸ್ತೆ, ನವೀಕರಣ ಉದ್ಯಾನವನ ಮತ್ತು ಕಾವೇರಿ ಕುಡಿಯುವ ನೀರಿನ ಸಂಪರ್ಕ ಮತ್ತು  110ವ್ಯಾಪ್ತಿಗೆ ಬರುವ ನಮ್ಮ ವಾರ್ಡ್ ಅಭಿವೃದ್ದಿ ಪಡಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

 ಹೆಮ್ಮಿಗೇಪುರ ವಾರ್ಡ್ ನಾಗರಿಕರ ಪ್ರೀತಿ, ವಿಶ್ವಾಸಕ್ಕೆ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

Post a Comment

0Comments

Post a Comment (0)