ಪ್ರೇಕ್ಷಕರನ್ನು ರಂಜಿಸಿದ "ರಚನ - ಗಾಯನ"

VK NEWS
By -
0

ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು|| ರಚನಾ ಶರ್ಮಾ ಅವರು ಗಾಯನ ಸೇವೆ ಸಲ್ಲಿಸಿದರು. 

"ವಂದಿಸುವುದಾದಿಯಲಿ ಗಣನಾಥನ" ಎಂಬ ಪುರಂದರದಾಸರ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ 'ಯುವ ಗಾಯಕಿ' ಕು|| ರಚನಾ ಶರ್ಮಾ, ತಾರತಮ್ಯವಾಗಿ : "ರಾಯರೇ ಗತಿಯು ನಮಗೆ" (ಶ್ಯಾಮಸುಂದರದಾಸರು), "ಕರೆದರೆ ಬರಬಾರದೆ ಗುರುವೆ" (ಕಮಲೇಶದಾಸರು), "ಹನುಮಂತ ದೇವ ನಮೋ" (ಪುರಂದರದಾಸರು), "ಪಾಲಿಸೆ ಎನ್ನನು ಶ್ರೀ ಮಹಾಲಕ್ಷ್ಮಿ" (ಪುರಂದರದಾಸರು), "ಬಂದು ನಿಂತಿಹ ನೋಡಿ ಭೂತಳದಿ ವೆಂಕಟ" (ಪುರಂದರದಾಸರು), "ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ" (ವಾದಿರಾಜರು), "ಸಾಮಾನ್ಯವಲ್ಲ ಶ್ರೀಹರಿ ಸೇವಾ" (ಪುರಂದರದಾಸರು), "ಆವಕುಲವೋ ರಂಗ" (ವಾದಿರಾಜರು) ಹೀಗೆ ಇನ್ನೂ ಹಲವಾರು ಅಪರೂಪದ ಹರಿದಾಸರ ಕೃತಿಗಳನ್ನು ಪ್ರಸ್ತುತಪಡಿಸಿ, 

ವಿಜಯದಾಸರು ರಚಿಸಿದ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ವಿದ್ವಾನ್ ಶ್ರೀ ಮೈಸೂರು ಸಂಜೀವಕಮಾರ್ ಮತ್ತು ಮೃದಂಗ ವಾದನದಲ್ಲಿ ವಿದ್ವಾನ್ ಶ್ರೀ ಮುರಳಿ ನಾರಾಯಣರಾವ್ ಸಾಥ್ ನೀಡಿದರು. ನಂತರ ಎಲ್ಲಾ ಕಲಾವಿದರನ್ನೂ ಶ್ರೀಮಠದ ಪದಾಧಿಕಾರಿಗಳು ಗೌರವಿಸಿದರು.  ---ದೇ.ಸು.

Post a Comment

0Comments

Post a Comment (0)