ಲೋಕಕಲ್ಯಾರ್ಥಕ್ಕಾಗಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ
ವಿಜಯನಗರ: ಸಮೃದ್ದಿ, ಸಂಪತ್ತು ಮತ್ತು ಕಲ್ಯಾಣರ್ಥಾಕ್ಕಾಗಿ ಶ್ರೀ ಸತ್ಯನಾರಾಯಣ ಪೂಜಾಕಾರ್ಯಕ್ರಮವನ್ನು ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಡಾ||ಎಸ್.ರಾಜುರವರ ನಿವಾಸದಲ್ಲಿ ಏರ್ಪಡಿಸಲಾಗಿತ್ತು.
ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಡಾ||ಎಸ್.ರಾಜು, ಡಾ||ಸಿರಿ ಎಸ್.ರಾಜುರವರು, ಡಾ||ಶ್ರೇಯಸ್ಸ್, ಡಾ||ಅಭಿಲಾಶ್ ರವರು ಕುಟುಂಬವರ್ಗದವರು ಪೂಜಾ ಕೈಂಕರ್ಯ ನೇರವೆರಿಸಿದರು.
ಇದೇ ಸಂದರ್ಭದಲ್ಲಿ ಡಾ||ಎಸ್.ರಾಜುರವರು ಮಾತನಾಡಿ ಸರ್ವೆ ಜನಾಃ ಸುಖಿನೋ ಭಗವಂತು ಎಂಬಂತೆ, ನಾನು ನನ್ನದು ಎನ್ನುವುದು ಬೀಡಬೇಕು, ನಾವೆಲ್ಲರು ಎಂದು ಕೋಪ, ತಾಪ ಬಿಟ್ಟು ತಾಳ್ಮೆ ಶಾಂತಿಯಿಂದ ಬದುಕಬೇಕು. ಸಮಾಜ ಎನು ಕೊಟ್ಟಿದೇ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಎನು ಕೊಟ್ಟಿದ್ದೇವೆ ಎಂದು ಅರಿಯಬೇಕು.ಜೀವನದಲ್ಲಿ ಯಶ್ವಸಿಯಾಗಲು ಪ್ರಯುತ್ನ ಜೊತೆಯಲ್ಲಿ ದೈವ ಕೃಪೆ ಇರಬೇಕು. ಎರಡು ಬಾರಿ ಪಾಲಿಕೆ ಸದಸ್ಯನಾಗಿ ಜನಸೇವೆ ಮಾಡಲು ಅವಕಾಶ ಸಿಕ್ಕತ್ತು, ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ಸಹಕಾರ ಕೊಟ್ಟ ರಾಜಕೀಯ ಮುಖಂಡರು, ಜನರ ಬೆಂಬಲ ಕೃತಜ್ಞತೆ ಸಲ್ಲಿಸುತ್ತೇನೆ.