ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಟಿತ ಕಾರ್ಮಿಕರ ಬೃಹತ್ ಸಮಾವೇಶ

VK NEWS
By -
0

 *ಕಾರ್ಮಿಕರ ಹಿತರಕ್ಷಣೆ ಮತ್ತು ಹಕ್ಕುಗಳು ಮತ್ತು ಸರ್ಕಾರದ ಸೌಲಭ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ* 

ರಾಜಾಜಿನಗರ:ಶ್ರೀರಾಮಮಂದಿರ ಆಟದ ಮೈದಾನ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟ ಮತ್ತು ಅಖಿಲ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣ ವೇದಿಕೆ ವತಿಯಿಂದ ರೈತರು ಮತ್ತು ಕಟ್ಟಡ ಕಾರ್ಮಿಕರು ಮತ್ತು 103ವಲಯಕ್ಕೆ ಸೇರುವ ಅಸಂಘಟಿತ ಕಾರ್ಮಿಕರಿಗಾಗಿ ಜನಜಾಗೃತಿ ಸಮಾವೇಶ.



ಕನ್ನಡಪರ ಹೋರಾಟಗಾರ, ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಕ್ರಾಂತಿರಾಜು, ಕೆ.ಆರ್.ಜಿ.ಎಸ್.ಕಾರ್ಮಿಕ ಸಂಘಟನೆ ಅಧ್ಯಕ್ಷರಾದ ಬಿ.ದೇವರಾಜ್, ವೈಭವ ಕರ್ನಾಟಕ ಸಂಘಟನೆ ಅಧ್ಯಕ್ಷರಾದ ವೆಂಕಟೇಶ್ ಗೌಡ, ಕಾರ್ಮಿಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಡಾ.ಎಂ. ಮಹೇಶ್, ಮಹಿಳಾ ಅಧ್ಯಕ್ಷೆ ಶೈಲಜ ರವರು ದೀಪ ಬೆಳಗಿಸಿ ಸಮಾವೇಶ ಉದ್ಘಾಟನೆ ಮಾಡಿದರು.

ನೂರಾರು ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು ನಂತರ  ಆಯುಷ್ಮಾನ್ ಭಾರತ್ ಮತ್ತು ಇ-ಶ್ರಮ್ ಕಾರ್ಡ್ ನೋಂದಾಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ಹಕ್ಕು ಮತ್ತು ಯೋಜನೆಗಳ ಮಾಹಿತಿ ನೀಡಲಾಯಿತು.

ಇ.ಎಸ್.ಐ.ಮತ್ತು ಪಿಂಚಣಿ ಸೌಲಭ್ಯ ಮತ್ತು ಗ್ರಾಜುಯೇಟಿ ಹಾಗೂ ಬೋನಸ್ ಸೌಲಭ್ಯಗಳನ್ನು ಪಡೆದುಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಮಿಕರ ಇಲಾಖೆಯಲ್ಲಿ  ನೋಂದಾಣಿ ಮಾಡಲು ಇರುವ ಸಮಸ್ಯೆಗಳು ಮತ್ತು ಇಲಾಖೆ ನಿಧಾನಗತಿ ಕೆಲಸದಿಂದ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆ ಇಲಾಖೆಯಲ್ಲಿ ಭ್ರಷ್ಟಚಾರ ವಿರುದ್ದ ಸಂಘಟನೆ ಮೂಲಕ ಹೋರಾಟ ಮಾಡುವುದು.

 ಅಂದೇ ದುಡಿದು ಅಂದೇ ಜೀವನ ಬಂಡಿ ಸಾಗಿಸುವ ಕಾರ್ಮಿಕರಿಗೆ ನೂರೆಂಟು ಸಂಕಷ್ಟಗಳು ಇದೆ.

ರೈತ ಮತ್ತು ಕಾರ್ಮಿಕ ಎರಡು ಕಣ್ಣುಗಳು ಇದ್ದಂತೆ, ಅವರು ಚನ್ನಾಗಿದ್ದರೆ ದೇಶ ಅಭಿವೃದ್ದಿ ಸಾಧ್ಯ.

ಕಾರ್ಮಿಕರಿಗೆ ಬಸ್ ಪಾಸ್ ಸೌಲಭ್ಯ, ಕಾರ್ಮಿಕರಿಗೆ ಕನಿಷ್ಟ ವೇತನ ಮತ್ತು ವೈದ್ಯಕೀಯ ಚಿಕಿತ್ಯೆ ಮರುಪಾವತಿ ಕಾರ್ಮಿಕರಿಗೆ ಸಿಗುವ ಸೌಲಭ್ಯ ಕುರಿತು ಅರಿವು ಮೂಡಿಸಲಾಯಿತು.

ಕನ್ನಡ ಹೋರಾಟಗಾರ ನಟರಾಜ್ ಬೊಮ್ಮಸಂದ್ರ, ಕಾರ್ಮಿಕರ ಪರಿಷತ್ತು ಅಧ್ಯಕ್ಷರಾದ ರವಿಶೆಟ್ಟಿ ಬೈಂದೂರು ಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಬೆಟ್ಟಸ್ವಾಮಿಗೌಡ,  ಸಂತೋಷ್, ಶಿವಕುಮಾರ್, ಸುನೀಲ್, ಕೃಷ್ಣೆಗೌಡ, ಈಶ್ವರಪ್ಪ, ಗಿರಿಜಮ್ಮರವರು, ರಂಗಸ್ವಾಮಿ, ದೇವೇಂದ್ರಪ್ಪ, ಓಲೇಕಾರ್  ಪಾಲ್ಗೊಂಡಿದ್ದರು.

*ಕಾರ್ಮಿಕರಿಗೆ ಜಾಗೃತಿ ಮೂಡಿಸಲು ಜಾಥ ನಾಗರಬಾವಿ ವೃತ್ತದಿಂದ ಆರಂಭವಾಗಿ ರಾಜಾಜಿನಗರ ಸ್ಟಾರ್ ಬಜಾರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ಪೂಜೆ ಸಲ್ಲಿಸಿ, ರಾಮಮಂದಿರದ ಸಮಾವೇಶಕ್ಕೆ ಆಗಮಿಸಿದರು*

Post a Comment

0Comments

Post a Comment (0)