*ಕೃಷ್ಣ ಜನ್ಮಾಷ್ಟಮಿ 2024 ರ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ.!*

VK NEWS
By -
0

 🚩🕉️ ಓಂ ಶ್ರೀ ಗುರುಭ್ಯೋ ನಮಃ 🕉️🚩 ‌             

ಹಿಂದೂಗಳ ಹಬ್ಬವಾದ ಜನ್ಮಾಷ್ಟಮಿಯನ್ನು ಮಹಾವಿಷ್ಣುವಿನ ಎಂಟನೇ ಅವತಾರವಾದ ಭಗವಾನ್ ಶ್ರೀ ಕೃಷ್ಣನ ಜನ್ಮ ದಿನವೆಂದು ಆಚರಿಸಲಾಗುವುದು. 2024 ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್‌ 26 ರಂದು ಸೋಮವಾರ ಆಚರಿಸಲಾಗುವುದು. ಈ ಶುಭ ದಿನದಂದು ಜನರು ಶ್ರೀಕೃಷ್ಣನನ್ನು ಪೂಜಿಸಿ, ಮಂತ್ರ, ಭಜನೆಯನ್ನು ಹಾಡಿ, ಉಪವಾಸ ವ್ರತವನ್ನು ತೆಗೆದುಕೊಳ್ಳುತ್ತಾರೆ. ಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನೆಂದು ನಂಬಲಾದ ಭಕ್ತರು ಜನ್ಮಾಷ್ಟಮಿಯ ತಡರಾತ್ರಿಯಲ್ಲಿ ಕೃಷ್ಣನಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಾಲಯಗಳನ್ನು ಮತ್ತು ಮನೆಗಳನ್ನು ವಿಶಿಷ್ಟವಾಗಿ ಅಲಕಂರಿಸಲಾಗುತ್ತದೆ ಮತ್ತು ದೇವರ ವಿಗ್ರಹಗಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಅದನ್ನು ಹೂವುಗಳಿಂದ ಅಲಂಕರಿಸುತ್ತಾರೆ. 

*​ಕೃಷ್ಣ ಜನ್ಮಾಷ್ಟಮಿ 2024 ಶುಭ ಮುಹೂರ್ತ​*

- ಅಷ್ಟಮಿ ತಿಥಿ ಆರಂಭ: 2024 ರ ಆಗಸ್ಟ್ 26 ರಂದು ಮುಂಜಾನೆ 3:39 ರಿಂದ

- ಅಷ್ಟಮಿ ತಿಥಿ ಮುಕ್ತಾಯ: 2024ರ ಆಗಸ್ಟ್ 27 ರಂದು ಮುಂಜಾನೆ 2:19

- ರೋಹಿಣಿ ನಕ್ಷತ್ರ ಆರಂಭ: 2024 ರ ಆಗಸ್ಟ್ 26 ರಂದು ಮಧ್ಯಾಹ್ನ 3:55

- ರೋಹಿಣಿ ನಕ್ಷತ್ರ ಮುಕ್ತಾಯ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38

- ನಿಶಿತಾ ಪೂಜಾ ಸಮಯ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:01 ರಿಂದ 12:45 ರವರೆಗೆ

- ಮಧ್ಯರಾತ್ರಿ ಶುಭ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:23 ಕ್ಕೆ

- ಪಾರಣ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38

- ರೋಹಿಣಿ ನಕ್ಷತ್ರ ಮುಕ್ತಾಯ ಸಮಯ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38

- ಪಾರಣ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:45

- ಚಂದ್ರೋದಯ ಸಮಯ: 2024 ರ ಆಗಸ್ಟ್ 26 ರಂದು ರಾತ್ರಿ 11:20



*​ಕೃಷ್ಣ ಜನ್ಮಾಷ್ಟಮಿ ಮಹತ್ವ​*


ಹಿಂದೂಗಳಿಗೆ ಜನ್ಮಾಷ್ಟಮಿ ಬಹಳ ಪ್ರಮುಖವಾದ ದಿನ. ಭಗವಾನ್ ಕೃಷ್ಣನ ಭಕ್ತರು ಈ ಹಬ್ಬವನ್ನು ಪ್ರಪಂಚದಾದ್ಯಂತ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ಈ ಅದೃಷ್ಟದ ದಿನದಂದು ಭಗವಾನ್ ವಿಷ್ಣುವಿನ ಅಭಿವ್ಯಕ್ತಿಯಾದ ಶ್ರೀಕೃಷ್ಣನು ಜನಿಸಿದನು. ಶ್ರೀಕೃಷ್ಣನು ಮಹಾವಿಷ್ಣುವಿನ ಎಂಟನೇಯ ಅವತಾರ. ಶ್ರೀಕೃಷ್ಣ ತಂದೆ ತಾಯಿ ವಸುದೇವ ಮತ್ತು ದೇವಕಿಯಾದರೂ ಅವನು ಯಶೋದೆ ಮತ್ತು ನಂದರ ಮಗನಾಗಿ ಬೆಳೆದನು. ಈ ದಿನದಂದು ಶ್ರೀಕೃಷ್ಣನಿಗೆ ಪ್ರಿಯವಾದ ಹೂವುಗಳು, ಭೋಗಗಳನ್ನಿಟ್ಟು ಪೂಜೆ ಮಾಡುತ್ತಾರೆ. ಈ ದಿನ ಶ್ರೀಕೃಷ್ಣನ ಮಗುವಿನ ರೂಪಕ್ಕೆ ಪೂಜೆ ಮಾಡುವುದು ಸಂಪ್ರದಾಯ.


*​ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ​*


- ಮುಂಜಾನೆ ಬೇಗ ಎದ್ದು, ಪವಿತ್ರ ಸ್ನಾನ ಮಾಡಿ ಮತ್ತು ಭಕ್ತಿಯಿಂದ ಕಠಿಣ ಉಪವಾಸವನ್ನು ಆಚರಿಸುವ ಸಂಕಲ್ಪವನ್ನು ತೆಗೆದುಕೊಳ್ಳಿ.

- ಪೂಜಾ ವಿಧಿವಿಧಾನಗಳನ್ನು ಪ್ರಾರಂಭಿಸುವ ಮೊದಲು ಮನೆ ಮತ್ತು ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.

- ನಂತರ ಬಾಲ ಗೋಪಾಲನಿಗೆ ನೀರು, ಗಂಗಾಜಲ, ಪಂಚಾಮೃತದಿಂದ ಅಭಿಷೇಕ ಮಾಡಿಸಿ.

- ಶ್ರೀಕೃಷ್ಣನಿಗೆ ಅಲಂಕಾರವನ್ನು ಮಾಡಿ.

- ಹಳದಿ ಚಂದನದ ತಿಲಕವನ್ನು ಇಡಿ.

- ಮರದ ಹಲಗೆಯನ್ನು ತೆಗೆದುಕೊಂಡು ಅದರ ಮೇಲೆ ಹಳದಿ ಬಣ್ಣದ ಬಟ್ಟೆಯನ್ನು ಹರಡಿ ಅದರ ಮೇಲೆ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆ ಮಾಡಿ ಹೂವಿನಿಂದ ಅಲಂಕರಿಸಿ.

- ನಂತರ ಕೃಷ್ಣನ ವಿಗ್ರಹಕ್ಕೆ ತುಳಸಿ ಎಲೆ, ಪಂಚಾಮೃತ, ಸಿಹಿತಿಂಡಿಗಳು ಹಾಗೂ 5 ವಿವಿಧ ರೀತಿಯ ಹಣ್ಣುಗಳು ಮತ್ತು ಒಣಹಣ್ಣುಗಳನ್ನು ಅರ್ಪಿಸಿ.

- ಶ್ರೀಕೃಷ್ಣನನ್ನು ಒಲಿಸಿಕೊಳ್ಳಲು 21, 31 ಅಥವಾ 56 ವಿಧದ ಭೋಗಗಳನ್ನು ಅರ್ಪಿಸಿ.

- ಶ್ರೀಕೃಷ್ಣನಿಗೆ ಆರತಿಯನ್ನು ಮಾಡಿ. ಈ ದಿನ ಮಧ್ಯರಾತ್ರಿ ಶ್ರೀಕೃಷ್ಣನನ್ನು ಪೂಜಿಸುವುದು ಹೆಚ್ಚು ಫಲಪ್ರದವಾಗಿರುತ್ತದೆ.


*​ಕೃಷ್ಣ ಜನ್ಮಾಷ್ಟಮಿ ಪ್ರಸಾದ​*

- ಧನಿಯಾ ಪಂಜಿರಿ

- ಕಲ್ಲು ಸಕ್ಕರೆ

- ತುಳಸಿ ಎಲೆಗಳು

- ಮಖಾನಾ ಪಾಯಸ

- ಚರಣಾಮೃತ

- ಡ್ರೈ ಫ್ರೂಟ್ ಖೀರ್

- 56 ವಿಧದ ವಿವಿಧ ಭಕ್ಷ್ಯಗಳು


*​ಕೃಷ್ಣ ಜನ್ಮಾಷ್ಟಮಿ ಮಂತ್ರ​*

- ಓಂ ನಮೋ ಭಗವತೇ ಶ್ರೀ ಗೋವಿಂದಾಯ ನಮಃ

- ಒಂ ನಮೋ ಭಗವತೇ ವಾಸುದೇವಾಯ ನಮಃ

- ಓಂ ನಮೋ ಭಗವತೇ ತಸ್ಮೈ ಕೃಷ್ಣಾಯ ಕುಂಠಮೇಧಸೇ

ಸರ್ವವ್ಯಾಧಿ ವಿನಾಶಾಯ ಪ್ರಭೋ ಮಾಮೃತಂ ಕೃಧಿರಾಂ

- ಹರೇ ಕೃಷ್ಣ ಹರೇ ಕೃಷ್ಣ

ಕೃಷ್ಣ ಕೃಷ್ಣ ಹರೇ ಹರೇ

ಹರೇ ರಾಮ ಹರೇ ರಾಮ

ರಾಮ ರಾಮ ಹರೇ ಹರೇ

- ಕೃಂ ಕೃಷ್ಣಾಯ ನಮಃ

- ಓಂ ದೇವಿಕಾನಂದನಾಯ ವಿದ್ಮಹೇ

ವಾಸುದೇವಾಯ ಧೀಮಹಿ

ತನ್ನೋ ಕೃಷ್ಣಃ ಪ್ರಚೋದಯಾತ್

- ಓಂ ಕ್ಲೀಂ ಕೃಷ್ಣಾಯ ನಮಃ

- ಗೋಕುಲನಾಥಾಯ ನಮಃ

Post a Comment

0Comments

Post a Comment (0)