ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿ ಗುರುಗಳ ಆರಾಧನೆ

VK NEWS
By -
0

  ಬೆಂಗಳೂರು : ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿ  90 ವರ್ಷಗಳನ್ನು ಪೂರೈಸಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಆಗಸ್ಟ್ 20 ರಿಂದ 23ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಈ ನಾಲ್ಕೂ ದಿನಗಳಲ್ಲಿಯೂ ಬೆಳಗ್ಗೆ ಫಲಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಮತ್ತು ಅನ್ನದಾನ ಸೇವೆಗಳು ನಡೆಯಲಿದೆ. 

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ರೀತಿ ಇವೆ : ಆಗಸ್ಟ್ 20, ಮಂಗಳವಾರ ಸಂಜೆ 6-00ಕ್ಕೆ ಶ್ರೀಮತಿ ಸುಮಲತಾ ಮಂಜುನಾಥ್ ಮತ್ತು ಶ್ರೀಮತಿ ಐಶ್ವರ್ಯ ಶ್ರೀನಿಧಿ ಕುಲಕರ್ಣಿ ಇವರಿಂದ ದಾಸವಾಣಿ. ವಾದ್ಯ ಸಹಕಾರ : ಶ್ರೀ ಎಸ್. ಶಶಿಧರ್ (ಪಿಟೀಲು), ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ). ನಂತರ ಅಂಬಾಭವಾನಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಥೋತ್ಸವ, ಮಹಾಮಂಗಳಾರತಿ.

ಆಗಸ್ಟ್ 21, ಬುಧವಾರ : ಸಂಜೆ 6-00ಕ್ಕೆ ಲಾಸ್ಯ ನೃತ್ಯ ಕ್ಷೇತ್ರ ತಂಡದವರಿಂದ ಭರತನಾಟ್ಯ. ನಂತರ ಶ್ರೀ ರಾಮ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಥೋತ್ಸವ, ಮಹಾಮಂಗಳಾರತಿ.

ಆಗಸ್ಟ್ 22, ಗುರುವಾರ : ಸಂಜೆ 6-00ಕ್ಕೆ : ಕು|| ಪ್ರತೀಕ್ಷಾ ಜಿ. ರಾವ್ ಮತ್ತು ಸಂಗಡಿಗರಿಂದ ದಾಸವಾಣಿ. ನಾಟ್ಯೇಶ್ವರ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ. ಪವಿತ್ರ ಗಾನ ವೃಂದದವರಿಂದ ಭಜನೆ, ರಥೋತ್ಸವ, ಮಹಾಮಂಗಳಾರತಿ.

ಆಗಸ್ಟ್ 23, ಶುಕ್ರವಾರ : ಸಂಜೆ 6-00ಕ್ಕೆ ವಿದ್ವಾನ್ ಶ್ರೀನಿಧಿ ಆಚಾರ್ಯ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ನಂತರ ಮಹಾಮಂಗಳಾರತಿ, ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶ್ರೀ ಮಠದ ವಿಚಾರಣಾಕರ್ತರಾದ ಶ್ರೀ ಎಸ್. ಎನ್. ವೆಂಕಟೇಶ್ ಆಚಾರ್ ಮತ್ತು ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ವಿ. ಎನ್. ಶ್ರೀಧರ್ ಅವರು ತಿಳಿಸಿದ್ದಾರೆ.

Post a Comment

0Comments

Post a Comment (0)