ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನೋತ್ಸವ ಮತ್ತು ಸಂಗೀತೋತ್ಸವ

VK NEWS
By -
0

 ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನೋತ್ಸವ ಮತ್ತು ಸಂಗೀತೋತ್ಸವ 

ಬೆಂಗಳೂರು : 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತಾಹವನ್ನು ಪ್ರಕಾಶನಗರದ 10ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡಿದ್ದು, ಅವುಗಳ ವಿವರಗಳು ಈ ರೀತಿ ಇವೆ :


ಬೆಳಗಿನ ಪೂಜಾ ಕಾರ್ಯಕ್ರಮಗಳು : ಆರಾಧನೆಯ ಎಲ್ಲಾ ದಿನಗಳೂ ಬೆಳಗ್ಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 6-30ಕ್ಕೆ). ಆಗಸ್ಟ್ 17 - ವಿದುಷಿ ಶ್ರೀಮತಿ ಗಾಯತ್ರಿ ಮಯ್ಯ ಮತ್ತು ವಿದುಷಿ ಶ್ರೀಮತಿ ಪವಿತ್ರ ಪ್ರಶಾಂತ್ ನಿರ್ದೇಶನದಲ್ಲಿ ತಮೋಹ ಆರ್ಟ್ಸ್ ಫೌಂಡೇಶನ್ ಮತ್ತು ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ ನ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ", ಆಗಸ್ಟ್ 18-ಶ್ರೀ ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರು "ದಾಸವಾಣಿ", ಆಗಸ್ಟ್ 19-ಅಭಿನವ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ "ನೃತ್ಯ ಪ್ರದರ್ಶನ", ಆಗಸ್ಟ್ 20-ವಿದುಷಿ ನಂದಿನಿ ಗುಜಾರ್ ಮತ್ತು ಸಂಗಡಿಗರಿಂದ "ದಾಸವಾಣಿ", ಆಗಸ್ಟ್ 21-ಶ್ರೀಮತಿ ರೂಪಾ ಪ್ರಭಂಜನ,  ಶ್ರೀಮತಿ ರಮ್ಯಾ ಸುಧೀರ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ", ಆಗಸ್ಟ್ 22- ವಿದುಷಿ ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ".

ಆಗಸ್ಟ್ 23- ಬೆಳಗ್ಗೆ 9 ರಿಂದ ಉಡುಪಿ ಕಾಣಿಯೂರು ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಪವನ ಪರಿಮಳ ಪ್ರಸಾರಿಣೀ ಸಭಾ ವಾಚಿಕ ಪರೀಕ್ಷೆಗಳು, ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ, ಶ್ರೀಗಳಿಂದ ಸಂಸ್ಥಾನ ಪೂಜೆ , ಮಹಾಮಂಗಳಾರತಿ. ಸಂಜೆ 6-30 ರಿಂದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ದಿ|| ನಂದಗುಡಿ ರಾಮಚಂದ್ರರಾವ್ ಸ್ಮಾರಕ ಪಾರಿತೋಷಕ ವಿತರಣೆ,  ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ಯ ಮತ್ತು ಶ್ರೀ ಬ್ರಹ್ಮಣ್ಯಾಚಾರ್ಯ ಆಗಮಿಸಲಿದ್ದಾರೆಂದು ಶ್ರೀಮಠದ ಗೌರವ ಅಧ್ಯಕ್ಷರಾದ ಶ್ರೀ ಎನ್.ಜಿ. ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ

Post a Comment

0Comments

Post a Comment (0)