ಬೆಂಗಳೂರು : ಪ್ರಣವಾಂಜಲಿ ನೃತ್ಯ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ ಸಂಸ್ಥೆಯು ತನ್ನ 12ನೇ ವರ್ಷದ ವಾರ್ಷಿಕೋತ್ಸವವನ್ನು ನಗರದ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಗಸ್ಟ್ 31, ಶನಿವಾರ ಸಂಜೆ 5-00 ಗಂಟೆಗೆ ಆಯೋಜಿಸಿದೆ.
ಈ ನೃತ್ಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಅರವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದು, "ರಾಮಕಥಾ" ಎನ್ನುವ ಅದ್ಭುತವಾದ ನೃತ್ಯ ನಾಟಕವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಕೆ.ಎನ್. ಕೇಶವ ನಾರಾಯಣ (ಮಾಜಿ ನ್ಯಾಯಾಧೀಶರು, ಹೈ ಕೋರ್ಟ್ ಆಫ್ ಕರ್ನಾಟಕ), ಮತ್ತು ಶ್ರೀಮತಿ ದೀಪಾ ಕೆ.ಎನ್. (ನಟಿ, ಸಂಯೋಜಕರು) ಆಗಮಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿಯರಾದ ಶ್ರೀಮತಿ ಪವಿತ್ರ ಪ್ರಶಾಂತ್ ಹಾಗೂ ಶ್ರೀಮತಿ ಗಾಯತ್ರಿ ಮಯ್ಯ ತಿಳಿಸಿದ್ದಾರೆ.