ನಲ್ಮೆಯ ಪುಟಾಣಿಗಳೇ, ಅಕ್ಕರೆಯ ವಾಚಕಮಿತ್ರರೇ, ನಿಮ್ಮ ನಗರಕೇಂದ್ರಗ್ರಂಥಾಲಯ ಕುಮಾರಸ್ವಾಮಿ ಬಡಾವಣೆ ಶಾಖೆಯ ಗ್ರಂಥದಗುಡಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 10/08/2024ರಿಂದ 15/08/2024 ರ ವರೆವಿಗೂ ಗ್ರಂಥಪಾಲಕರ ದಿನಾಚರಣೆ ಹಾಗೂ ಸ್ವಾತಂತ್ರದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಕ್ಕಳು, ವಿದ್ಯಾರ್ಥಿಗಳಿಗೆ, ಮಹಿಳೆಯರು, ಹಿರಿಯನಾಗರೀಕರು, ಸಾರ್ವಜನಿಕ ಓದುಗರೆಲ್ಲರಿಗೂ ತಮ್ಮ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಕಲ್ಪಿಸುವ ಸಾಂಸ್ಕೃತಿಕ ಸ್ಪರ್ಧೆಗಳು, ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಎಸ್, ಎಸ್, ಎಲ್, ಸಿ, ಮತ್ತು ಪಿ, ಯು, ಸಿ, ಇಂಜಿನಿಯರಿಂಗ್ ಮತ್ತಿತರ ಪಠ್ಯಪುಸ್ತಕಗಳ ಪ್ರಧರ್ಶನ, ಗ್ರಂಥಾಲಯ ಸದಸ್ಯರು ತಮಗೆ ಬೇಕಾದ ಒಂದು ಪುಸ್ತಕವನ್ನು ಸಂಪೂರ್ಣ ಉಚಿತವಾಗಿ ಪಡೆಯುವ ಅವಕಾಶ, ಸಾರ್ವಜನಿಕ ಸೇವೆಯಲ್ಲಿಯೇ ಸಂತೃಪ್ತಿ ಕಾಣುತ್ತಿರುವ ಯಶಸ್ವೀ ಗ್ರಂಥಪಾಲಕರನ್ನು ಉತ್ತಮ ಗ್ರಂಥಪಾಲಕ ಪ್ರಶಸ್ತಿ ನೀಡಿ ಆತ್ಮೀಯವಾಗಿ ಅಭಿನಂದಿಸುವ, ಉತ್ತಮ ಓದುಗರಿಗೆ ಪ್ರೊತ್ಸಾಹನೀಡುವ ಉತ್ತಮ ಓದುಗ ಪ್ರಶಸ್ತಿ ನೀಡಿ ಉತ್ತೇಜಿಸುವ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡುವ ಯಶಸ್ವಿ ಸಾಧಕರನ್ನು ನೋಡುವ ಅವರ ಪ್ರೇರಕನುಡಿಗಳನ್ನು ಕೇಳುವ, ಮಕ್ಕಳ ನೃತ್ಯ, ಗಾಯನದೊಂದಿಗೆ ಖ್ಯಾತ ಕಲಾವಿದರಿಂದ ಹಾಸ್ಯ ನಾಟಕಪ್ರಧರ್ಶನ, ಈ ಎಲ್ಲಾ ಕಾರ್ಯಕ್ರಮಗಳು ನಿಮ್ಮಿಂದ, ನಿಮಗಾಗಿ, ನೀವೇ ನಡೆಸುವ ವಿಶೇಷ ಪ್ರಸಂಗಗಳು, ತಪ್ಪದೇ ಬನ್ನಿ, ಸಂಭ್ರಮಿಸಿ.