ವ್ಯಾಸ ತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಪಂಡಿತರಾದ ಲೇಖಕರೂ ಉತ್ತಮ ವಾಗ್ಮಿಗಳೂ ಆದ ಶ್ರೀನಿಧಿ ಪ್ಯಾಟಿ ಆಚಾರ್ಯರು ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನದ ನೂತನ ನಿರ್ದೇಶಕರಾಗಿ(ಪ್ರಭಾರ) ನಿಯುಕ್ತರಾಗಿದ್ದಾರೆ.
2018ನೇ ಇಸವಿಯಲ್ಲಿ ಪೂರ್ಣಪ್ರಜ್ಞ ಸಂಶೋಧನ ಮಂದಿರದ ಯೋಗಕೋಶ ಪ್ರಾಜೆಕ್ಟ್ನಲ್ಲಿ ಕಾರ್ಯನಿರ್ವಹಿಸಿ ಯೋಗಕೋಶವೆಂಬ ಉತ್ತಮ ಕೃತಿಯನ್ನು ನೀಡಿರುವ ಆಚಾರ್ಯರು ಅತ್ಯುತ್ತಮ ಸಂಶೋಧಕರಾಗಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಶ್ರೀನಿಧಿ ಆಚಾರ್ಯರು ಪಂಡಿತರಾದ ತಿರುಮಲಾಚಾರ್ಯರ ಅಸಾಮಾನ್ಯ ಕೃತಿಯಾದ ಸರಳ ಕಠಿಣ ಸಂಸ್ಕೃತವನ್ನು ವಿಶ್ವವ್ಯಾಪಿಯಾಗಿ ತಲುಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದವರು.
ಆಚಾರ್ಯರು ಅನೇಕ ವಿದ್ವತ್ಪೂರ್ಣ ಲೇಖನಗಳ ಮೂಲಕ ಪಾಂಡಿತ್ಯಪೂರ್ಣ ಪ್ರವಚನಗಳ ಮೂಲಕ ವಿದ್ವತ್ ಲೋಕದಲ್ಲಿ ಮಾನ್ಯರಾದವರು.
ವ್ಯಾಸ ತೀರ್ಥ ಸಂಶೋಧನಾ ಮಂದಿರದ ಚುಕ್ಕಾಣಿ ಹಿಡಿದ ಶ್ರೀನಿಧಿ ಪ್ಯಾಟಿ ಆಚಾರ್ಯರಿಗೆ ಹಾರ್ದಿಕ ಅಭಿನಂದನೆಗಳು.
ಡಾ ಡಿಪಿ ಮಧುಸೂದನ ಆಚಾರ್ಯ
ಕಾರ್ಯದರ್ಶಿಗಳು
ವ್ಯಾಸ ತೀರ್ಥ ವಿದ್ಯಾ ಪೀಠ