ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 25 ರ ಹೊರಮಾವು ವಾರ್ಡಿನ ಬಾಬುಸಾಬ್ ಪಾಳ್ಯ ಗ್ರಾಮದಲ್ಲಿ ಇಂದು 28/07/2024ರಂದು ನಡೆದ ಸ್ವಚ್ಛ ಭಾರತದ ಅಭಿಯಾನದ ಅಂಗವಾಗಿ ಕಸದ ಬಗ್ಗೆ, ಪ್ಲಾಸ್ಟಿಕ್ ಬಗ್ಗೆ ಹಾಗೂ ಡೆಂಗ್ಯೂ ಬಗ್ಗೆ ಸಾರ್ವಜನಿಕರಲ್ಲಿ ಜನಜಾಗೃತಿ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ಬಿನ ಜಿಲ್ಲೆಯ 317ಎಫ್ ನ ಸ್ವಚ್ಛ ಭಾರತದ ಸಂಯೋಜಕರಾದ ಲಯನ್ ಕನಕರಾಜು ರವರು, ಕ್ಲೀನ್ ಬೆಂಗಳೂರಿನ ರಾಜೇಶ್ ರವರು, ಆದ್ಯ ಫೌಂಡೇಶನ್ ಉಮಾ ರಾಜೇಶ್ವರಿ ರವರು ಲಯನ್ಸ್ ಕ್ಲಬ್ ಗೆಳೆಯರ ಬಳಗದ ಅಧ್ಯಕ್ಷರು ಲಯನ್ ಸರಸ್ವತಿ ರೆಡ್ಡಿರವರು, ಲಯನ್ಸ್ ಕ್ಲಬ್ ಆಫ್ ಅನ್ನಪೂರ್ಣ ಅಧ್ಯಕ್ಷರು ಲಯನ್ ಆರ್ ಶಿವಕುಮಾರ್ ರವರು ಹಾಗೂ 2 ಕ್ಲಬ್ಬಿನ ಸದಸ್ಯರುಗಳು ಹಾಗೂ ಬಹು ಮುಖ್ಯವಾಗಿ ಬಿಬಿಎಂಪಿ ಪೌರಕಾರ್ಮಿಕರು ಸೂಪರ್ವೈಸರ್ಸ್ ರವರು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರಾದ ಅನ್ನಪೂರ್ಣ ರವರು ಹಾಗೂ ಗ್ರಾಮದ ಎಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಳ್ಳಲಾಯಿತು.