ರಾಜ್ಯದಲ್ಲಿ ಒಂದೂವರೆ ವರ್ಷಕ್ಕೆ 1927 ಕೊಲೆ, 5810 ಕಿಡ್ನಾಪ್!

VK NEWS
By -
0

 


ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 1927 ಕೊಲೆ, 1910 ಸುಲಿಗೆ, 5810 ಕಿಡ್ನಾಪ್ ಹಾಗೂ 263 ದರೋಡೆ ಪ್ರಕರಣಗಳು ವರದಿಯಾಗಿವೆ. ಸಮಾಜಘಾತಕ ಶಕ್ತಿಗಳನ್ನು ನಿಯಂತ್ರಣ ಮಾಡಲು ರಾಜ್ಯ ಗೃಹ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಈ ಅಂಕಿ- ಸಂಖ್ಯೆಗಳು ಪೂರಕವಾಗಿವೆ.

2023ರಿಂದ 2024ರ ಜೂನ್ ವರೆಗಿನ ಪ್ರಕರಣಗಳನ್ನು ಗಮನಿಸಿದಾಗ ಪ್ರತಿವರ್ಷವೂ ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಇಡೀ ವರ್ಷದಲ್ಲಿ 1296 ಕೊಲೆ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 631 ದಾಖಲಾಗಿದೆ. ಸುಲಿಗೆಯ ಪ್ರಮಾಣವೂ ಕಡಿಮೆ ಆಗಿಲ್ಲ. ಕಳೆದ ವರ್ಷ 1246 ಪ್ರಕರಣಗಳು ದಾಖಲಾಗಿದ್ದರೆ ಈ ವರ್ಷ ಜೂನ್ ಅಂತ್ಯದವರೆಗೆ ಅರ್ಧ ವರ್ಷದಲ್ಲಿ 664 ಪ್ರಕರಣಗಳು ದಾಖಲಾಗಿವೆ. ಅಂದರೆ ಇದು ಶೇಕಡಾ 50ಕ್ಕಿಂತಲೂ ಹೆಚ್ಚು. ಗಲಭೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಾಗಿರುವುದು ಕಣ್ಣಿಗೆ ರಾಚುವಂತೆ ಗೋಚರವಾಗುತ್ತಿದೆ. ಇದೇ ವೇಳೆ ದರೋಡೆ ಪ್ರಕರಣ ಸಣ್ಣ ಪ್ರಮಾಣದಲ್ಲಿ ಕಡಿಮೆ ಆದಂತೆ ಗೋಚರಿಸುತ್ತಿದೆ.

Post a Comment

0Comments

Post a Comment (0)