ಆರೋಪಿ ಮನೆಯಲ್ಲಿತ್ತು 10 ಕೆಜಿ ಚಿನ್ನದ ಬಿಸ್ಕೆಟ್ !

VK NEWS
By -
0


  ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿಯ ಎಸ್​ಐಟಿ ತಂಡ, ಆರೋಪಿ ಸತ್ಯನಾರಾಯಣ ವರ್ಮಾ ಮನೆಯಲ್ಲಿ ಚಿನ್ನದ ಬಿಸ್ಕೆಟ್ ವಶಕ್ಕೆ‌ ಪಡೆದಿದೆ.

ಆರೋಪಿಯ ಹೈದರಾಬಾದ್ ಮನೆಯಲ್ಲಿ ಬರೋಬ್ಬರಿ 10 ಕೆ.ಜಿ‌.ಚಿನ್ನದ ಬಿಸ್ಕೆಟ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಐಟಿಯ ಉನ್ನತ ಮೂಲಗಳು ಮಾಹಿತಿ ನೀಡಿವೆ. ಆರೋಪಿ ಸತ್ಯನಾರಾಯಣ ವರ್ಮಾ, ಬರೋಬ್ಬರಿ 35 ಕೆ.ಜಿ.ಚಿನ್ನದ ಬಿಸ್ಕೆಟ್ ಖರೀದಿ ಮಾಡಿರುವ ಮಾಹಿತಿಯಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Post a Comment

0Comments

Post a Comment (0)