ಫುಟ್ಬಾಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ ರೂಟ್ಸ್ ಬೆಂಗಳೂರು

VK NEWS
By -
0


ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಫುಟ್ಬಾಲ್ ಪಂದ್ಯಾವಳಿ 

ಬೆಂಗಳೂರು, ಜೂನ್ 17: ಕ್ರೀಡೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಿ ಬೆಳೆಸಬೇಕು. ಇಂದಿನ ದಿನಗಳಲ್ಲಿ ಕ್ರಿಕೆಟ್ ರೀತಿ ಫುಟ್ಬಾಲ್ ಆಟವನ್ನು ಸಹ ಪ್ರೊತಾಹಿಸಿ ಜನಪ್ರಿಯಗೊಳಿಸಬೇಕು ಎಂದು ಖ್ಯಾತ ಕನ್ನಡ ನಟರಾದ ಅನಿರುಧ್ ಜಾಟ್ಕರ್ ಆಶೀಸಿದರು.

ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ  ಐದನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಫುಟ್ಬಾಲ್ ಪಂದ್ಯಾವಳಿಯ ಫೈನಲ್ಸ್ ಪಂದ್ಯಾವಳಿಯಲ್ಲಿ ವೀಕ್ಷಿಸಿ ಮಾತನಾಡಿದ ಅವರು ನಿಜ ಹೇಳಬೇಕೆಂದರೆ ನಾನು ಫುಟ್ಬಾಲ್ ಪಂದ್ಯಾವಳಿ ವೀಕ್ಷಿಸುವ ಭಾಗ್ಯ ದೊರೆತಿರಲಿಲ್ಲ. ಇಂದು ಅದ್ಭುತ ಪಂದ್ಯಾವಳಿ ವೀಕ್ಷಿಸುವ ಭಾಗ್ಯ ದೊರೆಯಿತು ಎಂದು ತಿಳಿಸಿದರು. 

ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಕಂಠೀರವ ಸ್ಟೇಡಿಯಂ ನಲ್ಲಿ ಜೂನ್ 15 ರಿಂದ ಜೂನ್ 17 ರ ವರೆಗೆ ಮೂರು ದಿನಗಳ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಆಯೋಜಿಸಲಾಗಿದ್ದು ಇಂದು ಫೈನಲ್ ಪಂದ್ಯಾವಳಿಯಲ್ಲಿ ಬೆಂಗಳೂರು ರೂಟ್ಸ್ ತಂಡ ವಿಜಯೋತ್ಸವ ಭಾರಿಸಿತು. ಮಂಗಳೂರು ಎಫ್ ಸಿ ತಂಡ ಎರಡನೇ ತಂಡಕ್ಕೆ ತೃಪ್ತಿ ಪಡೆಯಬೇಕಾಯಿತು. 




ವಿಜೇತ ತಂಡಕ್ಕೆ ಒಂದು ಲಕ್ಷ ಬಹುಮಾನವನ್ನು ನೀಡಲಾಯಿತು ಮತ್ತು ಎರಡನೇ ಸ್ಥಾನ ಪಡೆದ ಮಂಗಳೂರು ಎಫ್ ಸಿ ತಂಡಕ್ಕೆ ಎರಡನೇ ಸ್ಥಾನ ಲಭಿಸಿತು. ಎರಡನೇ ಸ್ಥಾನಕ್ಕೆ 50000 ರೂಪಾಯಿ ಬಹಮಾನ ನೀಡಲಾಯಿತು.

ನಟ ಅನಿರುಧ್ ಮತ್ತು ಎಂಎಲ್ ಸಿ ರಾಮೋಜಿ ಗೌಡ, ನಿರ್ದೇಶಕರುಗಳಾದ ಜಾಕೋಬ್ ವರ್ಗಿಸ್, ಹರಿ ಸಂತೋಷ್ ಮಾತ್ತು ಎಂ ಆನಂದ್ ರಾಜ್ ಬಹುಮಾನ ವಿತರಿಸಿದರು.

Post a Comment

0Comments

Post a Comment (0)