'ತಗಡೆ, ಯಾವಾಗ್ಲೂ ನನ್ ಹತ್ರಾನೆ ಯಾಕೆ ಗುಮ್ಮಿಸ್ಕೋತೀಯಾ' ಎಂದ ದರ್ಶನ್‌ಗೆ ಈಗ ಉತ್ತರಿಸಿದ ಉಮಾಪತಿ

VK NEWS
By -
0


 ಉಮಾಪತಿ ಗೌಡ 'ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ' ಎಂದು ಬರೆದುಕೊಂಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಇತ್ತೀಚೆಗೆ ಯಶಸ್ಸು ಕಂಡಿದ್ದ ದರ್ಶನ್ ನಟನೆಯ 'ಕಾಟೇರ' ಚಿತ್ರದ ಕಥೆಯ ಬಗ್ಗೆ. ರಾಬರ್ಟ್ ಚಿತ್ರದ ಸಕ್ಸಸ್ ಬಳಿಕ ನಟ ದರ್ಶನ್  ಹಾಗೂ ನಿರ್ಮಾಪಕ ಉಮಾಪತಿ ಗೌಡ  ನಡುವೆ ಕಥೆಯ ವಿಷಯಕ್ಕೆ ನಡೆದಿದ್ದ ಜಟಾಪಟಿ ಬಹುತೇಕರಿಗೆ ಗೊತ್ತಿದೆ. ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆರೋಪ ಸಾಬೀತಾದರೆ ನಟ ದರ್ಶನ್ ಕಾನೂನಿನ ಪ್ರಾಕರ ಕಠಿಣ ಶಿಕ್ಷೆ ಎದುರಿಸಲಿದ್ದಾರೆ. ಈ ವಿದ್ಯಮಾನ ನಡೆದ ಬೆನ್ನಲ್ಲೇ ಬಹಿರಂಗವಾಗಿ ಏನೂ ಹೇಳಿಕೆ ನೀಡದಿರುವ ನಿರ್ಮಾಪಕ ಉಮಾಪತಿ ಗೌಡ ಅವರು ತಮ್ಮ ಸ್ಟೇಟಸ್‌ನಲ್ಲಿ, ಘಟನೆಗೆ ಪ್ರತಿಕ್ರಿಯೆ ಎಂಬಂತೆ ಸ್ಟೇಟಸ್ ಹಾಕಿಕೊಂಡಿದ್ದಾರೆ. 

ಈ ಬಗ್ಗೆ ಉಮಾಪತಿ ಗೌಡ 'ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ' ಎಂದು ಬರೆದುಕೊಂಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಇತ್ತೀಚೆಗೆ ಯಶಸ್ಸು ಕಂಡಿದ್ದ ದರ್ಶನ್ ನಟನೆಯ 'ಕಾಟೇರ' ಚಿತ್ರದ ಕಥೆಯ ಬಗ್ಗೆ ಮಾತನಾಡಿದ್ದರು. 'ಕಾಟೇರ ಕತೆ ಕತೆ ನನ್ನದು ಎಂದಿದ್ದರು. ಅದಕ್ಕೆ ಕಾಟೇರ ಸಕ್ಸಸ್ ಮೀಟಲ್ಲಿ ದರ್ಶನ್ ಉಮಾಪತಿಗೆ 'ತಗಡೆ, ಯಾವಾಗ್ಲೂ ನನ್ ಹತ್ರಾನೆ ಯಾಕೆ ಗುಮ್ಮಿಸ್ಕೋತೀಯಾ' ಎಂದು ಮಾತನಾಡಿದ್ದರು ದರ್ಶನ್. 

'ಹೌದು ನಾನು ತಗಡೆ, ಆದ್ರೆ ಚಿನ್ನದ ತಗಡಾಗೋ ಸಮಯಾನೂ ಬರುತ್ತೆ..'ಎಂದು ತಾಳ್ಮೆ ಕಳೆದುಕೊಳ್ಳದೆ ಮಾತನಾಡಿದ್ದರು ಉಮಾಪತಿ,

ಅವರು  ಮಾತಾಡಿ ದೊಡ್ಡವರಾಗಿದ್ದಾರೆ, ಆಗಲಿ' ಎಂದು ಸುಮ್ಮನಾಗಿದ್ದರು. ಉಮಾಪತಿ ಇದೀಗ ತಮ್ಮ ಇನ್ಸ್ಟಾ ಸ್ಟೊರಿ ಮೂಲಕ ದರ್ಶನ್ ಅವರಿಗೆ ಉತ್ತರ ಕೊಟ್ಟಿದ್ದಾರೆ. 'ವಿಷ್ಣುವಿನ ತಾಳ್ಮೆ ಇರಲಿ, ಆದ್ರೆ ನರಸಿಂಹನ ಕೋಪ ಮರೆಯಬೇಡ'  ಎಂದಿರವ ವೀಡಿಯೋವನ್ನು ಹಂಚಿಕೊಂಡಿದ್ದಾರೆ ನಿರ್ಮಾಪಕ ಉಮಾಪತಿ. ರಾಬರ್ಟ್ ಚಿತ್ರದ ನಂತರ ಕೆಲ ಘಟನೆಗಳಿಂದ  ದರ್ಶನ್ ಉಮಾಪತಿ ನಡುವೆ ವಿವಾದ ಸೃಷ್ಟಿಯಾಗಿ ದೂರವಾಗಿದ್ದರು.
 

Post a Comment

0Comments

Post a Comment (0)