ಬೆಂಗಳೂರು : ಸಮಾಜ ನಮಗೆ ಏನು ನೀಡಿತು ಎಂಬುದಕ್ಕಿಂತ,ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ಮುಖ್ಯ ಎಂದು ಸಮಾಜ ಸೇವಕ ಗೋ ಸಂರಕ್ಷಕ ಗೋಪಾಲ ಮಹೇಂದ್ರ ಮುನ್ನೊಥ್ ಹೇಳಿದರು,
ಅವರು ವಿಜಯನಗರದ ಮಾರುತಿ ಮೆಡಿಕಲ್ ನ ಬಳಿ ಆಯೋಜಿಸಿದ್ದ ಸ್ವಯಂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಭಗವಂತ ನಮಗೆ ನೀಡಿರುವದರಲ್ಲಿ ಕಿಂಚಿತಾದರು ಬಡವರಿಗೆ ದೀನ ದಲಿತರಿಗೆ ನೀಡಬೇಕು, ಎಂದರು, ಹಾಲು ನೀಡುವ ಕಲಿಯುಗದ ಕಾಮಧೇನು ಗೋಮಾತೆಯನ್ನು ಸಂರಕ್ಷಿಸಿ ಪೂಜಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾದ್ವ ಮಹಾಸಭಾದ ವತಿಯಿಂದ ಮಹೇಂದ್ರ ಮುನ್ನೊಥ್ ಅವರನ್ನು ಕೋಶಾಧ್ಯಕ್ಷ ಕೆ ವಿ ರಾಮಚಂದ್ರ, ಉಪಾಧ್ಯಕ್ಷ ಅಶ್ವತನಾರಾಯಣ, ಸಂಘಟನಾ ಕಾರ್ಯದರ್ಶಿ ಎನ್ ಎಸ್ ಸುಧೀಂದ್ರ ರಾವ್ ಹಾಗು ನಾಟ್ಯ ಸನ್ನಿಧಿ ಸಂಸ್ಥಾಪಕಿ ಡಾ, ಮೋನಿಷಾ ನವೀನ್ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಹೇಮಾವತಿ ಅವರು ಅಭಿನಂದಿಸಿ ಸನ್ಮಾನಿಸಿದರು.