ದೆಹಲಿ : ಉಷ್ಣ ಅಲೆಗೆ 4 ದಿನಗಳಲ್ಲಿ 435 ಮಂದಿ ಬಲಿ, ಕೋವಿಡ್ ದಿನಗಳ ನೆನಪಿಸಿದ ಸಾವುಗಳು!

VK NEWS
By -
0

 

 ನವದೆಹಲಿ: ನವದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಗಾಳಿಯಿಂದಾಗಿ ಜನರು ಆಘಾತಕ್ಕೊಳಗಾಗಿ ನಿಂತಲ್ಲೇ ಕುಸಿದುಬಿದ್ದು, ಉಸಿರು ಚೆಲ್ಲುತ್ತಿದ್ದಾರೆ. ಇದರ ಪರಿಣಾಮ ದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಬರೋಬ್ಬರಿ 435 ಮಂದಿ ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ. 

ದೆಹಲಿಯ ಅತೀದೊಡ್ಡ ಸ್ಮಶಾನವಾದ ನಿಗಮಬೋಧ್ ಘಾಟ್ ನಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬಂತಹ ಭಾವನೆ ಮೂಡುತ್ತಿದೆ. ಜೂನ್ 18 ಮತ್ತು 21 ನಡುವೆ 435 ಶವಗಳು ಸ್ಮಶಾನಕ್ಕೆ ಬಂದಿವೆ ಎಂದು ಸ್ಮಶಾನ ನಿರ್ವಹಣೆಯ ಅಧಿಕಾರಿಗಳು ಹೇಳಿದ್ದಾರೆ. 

ಜೂನ್ 18 ರಂದು 97 ಮೃತದೇಹಗಳು ಅಂತಿಮ ವಿಧಿವಿಧಾನಕ್ಕೆ ಬಂದಿದ್ದವು. ಜೂನ್ 19 ರಂದು ನಿಗಮಬೋಧ ಘಾಟ್ನಲ್ಲಿ ಸುಮಾರು 142 ಚಿತೆಗಳನ್ನು ಸುಡಲಾಯಿತು. ಜೂನ್ 20 ರಂದು, ಘಾಟ್'ಗೆ 124 ಶವಗಳು ಬಂದಿದ್ದವು. ಈ ಅಂಕಿ ಅಂಶವು ಇದೂವರೆಗೆ ಘಾಟ್ಗೆ ಬಂದ ದೇಹಗಳ ಸರಾಸರಿ ಸಂಖ್ಯೆಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಒಂದು ದಿನದಲ್ಲಿ 253 ಶವಸಂಸ್ಕಾರಗಳನ್ನು ನಡೆಸಲಾಗಿತ್ತು.  ಶವಸಂಸ್ಕಾರಕ್ಕೆ ಜನರು ಸಾಲುಗಟ್ಟಿ ನಿಲ್ಲುತ್ತಿರುವುದನ್ನು ನೋಡಿದರೆ ಕೋವಿಡ್ ಪರಿಸ್ಥಿತಿ ನೆನಪಿಗೆ ಬರುತ್ತಿದೆ ಎಂದು ನಿಗಮ್ ಬೋಧ್ ಸಂಚಲನ್ ಸಮಿತಿಯ ಉಸ್ತುವಾರಿ ಸುಮನ್ ಕುಮಾರ್ ಗುಪ್ತಾ ಹೇಳಿದ್ದಾರೆ.

ಉಷ್ಣಅಲೆಯಿಂದಲೇ ಈ ಸಾವುಗಳು ಸಂಭವಿಸಿವೆ ಎಂದು ಅಧಿಕೃತವಾಗಿ ಸರ್ಕಾರ ಹೇಳದಿದ್ದರೂ, ವಾತಾವರಣ ಪರಿಸ್ಥಿತಿಯನ್ನು ಗಮಿಸಿದರೆ ಈ ಸಾವುಗಳಿಗೆ ಉಷ್ಣ ಅಲೆಯೇ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Post a Comment

0Comments

Post a Comment (0)