ಮಂತ್ರಾಲಯ ಕ್ಷೇತ್ರದಲ್ಲಿ ಬೆಂಗಳೂರಿನ ಸಹೋದರಿಯರ ಗಾಯನ

VK NEWS
By -
0

ಆಂಧ್ರಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರವಾದ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಸನ್ನಿಧಾನವಾದ ಮಂತ್ರಾಲಯದಲ್ಲಿ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಜೂನ್ 2, ಭಾನುವಾರದಂದು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪುಟ್ಟ ಸಹೋದರಿಯರಾದ ಕು|| ಅನುಷಾ ಸಾವಿತ್ರಿ ಭಟ್ ಮತ್ತು ಕು|| ಅನ್ವಿತಾ ಸಾವಿತ್ರಿ ಭಟ್ ಇವರುಗಳು ಹರಿದಾಸರ ಕೃತಿಗಳನ್ನೂ ಹಾಗೂ ಶ್ರೀ ಅನ್ನಮಾಚಾರ್ಯರ ಕೀರ್ತನೆಗಳನ್ನೂ ಪ್ರಸ್ತುತಪಡಿಸಿದರು. 


ಇವರ ಗಾಯನಕ್ಕೆ ವಿದ್ವಾನ್ ಶ್ರೀ ಗೋಪಾಲ ಗುಡಿಬಂಡೆ ತಬಲಾ ವಾದನದಲ್ಲಿ ಮತ್ತು ವಿದ್ವಾನ್ ಶ್ರೀ ಶ್ರೀಪಾದದಾಸ್ ಕೀ-ಬೋರ್ಡ್ ವಾದನದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದ ನಂತರ ಶ್ರೀ ಮಠದ ವತಿಯಿಂದ ಮಕ್ಕಳಿಗೆ ಗುರುಗಳ ಮಹಾಪ್ರಸಾದ ಮತ್ತು ಅನುಗ್ರಹ ಪತ್ರ ನೀಡಿ ಆಶೀರ್ವದಿಸಿದರು.


Post a Comment

0Comments

Post a Comment (0)