ಆಲ್ ಇಂಡಿಯಾ ಬ್ರಾಹ್ಮೀನ್ ಫೆಡರೇಷನ್ ನ ಕಾರ್ಯಕಾರಿಣಿ ಸಭೆಯು ರಾಜಸ್ಥಾನದ ಪುಷ್ಕರದ ದಧಿಚಿ ಭವನದಲ್ಲಿ ನಡೆಯಿತು, ಈ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು ಸನಾತನ ಧರ್ಮದ ಸಂರಕ್ಷಣೆ ಹಾಗು ಸಂಸ್ಕೃತಿ ಯನ್ನು ಉಳಿಸಿ ಬೆಳಸಲು ಎಲ್ಲರು ಕಾರ್ಯ ತತ್ಪರವಾಗಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ ಡಾ, ಪ್ರದೀಪ್ ಜ್ಯೋತಿ ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನಮ್ಮ ಕರ್ನಾಟಕದವರೆ ಆದ ಶ್ರೀಮತಿ ಮಾಲಿನಿ.ಎನ್, ಅವರನ್ನು ರಾಷ್ಟ್ರೀಯ ಮಹಿಳಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಅವರು ಘೋಷಿಸಿದರು.