ಬೆಂಗಳೂರು, ಜೂನ್. 18: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಮತ್ತು ಪವನ್ ಇಬ್ಬರನ್ನು ಪೊಲೀಸರು ಸ್ಥಳ ಮಹಜರಿಗಾಗಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪಳ ಪಳ ಹೊಳೆಯುತ್ತಿರುವ ಪವಿತ್ರಾ ಗೌಡ ಮುಖ ನೋಡಿದ ಮಾಧ್ಯಮದವರು ಮತ್ತು ಸಾರ್ವಜನಿಕರು ಬೆರಗಾಗಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಇರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ೧ ಆರೋಪಿ ಪವಿತ್ರಾ ಗೌಡ. ಆದರೆ, ಆಕೆ ಜೈಲಿನಲ್ಲಿರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಅರಾಮಾವಾಗಿ ಮನೆಯಲ್ಲಿಯೇ ಇರುವಂತೆ ಕಾಣಿಸುತ್ತಿದ್ದಾರೆ. ಮುಖದ ಮೇಲಿನ ನಗು ಮಾಸಿಲ್ಲ. ಮುಖದ ಮೇಲಿನ ಮೇಕಪ್ ಕೂಡ ಈಗ ತಾನೇ ಮಾಡಿದಂತಿದೆ. ಲಿಪ್ಸ್ಟಿಕ್ ಪಳ ಪಳ ಅನ್ನುತ್ತಿದೆ!.
ಕೊಲೆ ಆರೋಪಿ ಪವಿತ್ರಾ ಗೌಡ ಮುಖದಲ್ಲಿನ ಮೇಕಪ್, ಎದ್ದು ಕಾಣಿಸುತ್ತಿರುವ ಲಿಪ್ಸ್ಟಿಕ್ ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೈಲಿನಲ್ಲಿರುವ ದರ್ಶನ್ ಪ್ರೇಯಸಿಗೆ ಮೇಕಪ್ ತಂದುಕೊಟ್ಟವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಒಬ್ಬರ ಕೊಲೆ ಆರೋಪಿ ಇಷ್ಟು ಆರಾಮಾವಾಗಿ ನಗು ನಗುತ್ತಾ ಮೇಕಪ್ ಮಾಡಿಕೊಂಡು ಓಡಾಡಲು ಸಾಧ್ಯವೆ ಎಂಬ ಅನುಮಾನವನ್ನು ಮುಂದಿಡುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿಯಲ್ಲಿರುವ ಪವಿತ್ರಾ ಗೌಡಾಗೆ ಲಿಪ್ಸ್ಟಿಕ್ ತಂದು ಕೊಟ್ಟಿದ್ಯಾರು ಎಂಬಯನ್ನು ನೆಟ್ಟಿಗರು ಎತ್ತಿದ್ದಾರೆ. ಇಲ್ಲಿ ಆರೋಪಿಗಳಿಗೆ ಬ್ಯೂಟಿ ಪಾರ್ಲರ್ ಇದೆಯೇ...? ಆರೋಪಿಗಳನ್ನು ನ್ಯಾಯಾಲಯಕ್ಕೆ, ಸ್ಥಳ ಮಹಜರಿಗೆ ಕರೆತರುವಾಗ ಮೇಕಪ್ ಮಾಡಲಾಗುತ್ತದೆಯೇ ಎಂಬ ವ್ಯಂಗ್ಯ ಭರಿತ ಮಾತುಗಳ ಜೊತೆಗೆ ಪೊಲಿಸರ ವಿರುದ್ಧ ಆಕ್ರೋಶ ಹೊರಬಂದಿದೆ. ಪೊಲೀಸ್ ಠಾಣೆಯಲ್ಲಿ ದರ್ಶನ್ ಮತ್ತು ಗ್ಯಾಂಗ್ಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ
ಪವಿತ್ರಾ ಗೌಡ ಮನೆಯಲ್ಲಿ ಮಹಜರು ನಡೆಸುತ್ತಿದ್ದ ವೇಳೆ ಆರೋಪಿಗಳು ನಗು ಮುಖದಲ್ಲಿ ಓಡಾಡಿದ್ದಾರೆ. ಇದು ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದೆ. ಪೊಲೀಸರು ಸ್ಥಳ ಮಹಜರಿಗೆ ಮನೆಗೆ ಕರೆತಂದ ವೇಳೆ ಆರೋಪಿಗಳಾದ ಪವಿತ್ರಾ ಗೌಡ ಮತ್ತು ಪವನ್ ನಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಜನ ಬಾಯಿಗೆ ಬಂದಂತೆ ಉಗಿಯುತ್ತಿದ್ದಾರೆ.
ಒಬ್ಬ ವ್ಯಕ್ತಿಯ ಕೊಲೆಗೆ ಕಾರಣರಾಗಿ ಅರೋಪಿಗಳಾಗಿ ಜೈಲಿನಲ್ಲಿರುವ ಇವರು ಒಂದಷ್ಟು ಪಶ್ಚಾತಾಪ ಇಲ್ಲದೆ ಹೀಗೆ ಆರಾಮಾಗಿ ಇರಲು ಹೇಗೆ ಸಾಧ್ಯ ಎಂದು ಜನಸಾಮಾನ್ಯರು ತಲೆ ಕೆರೆದುಕೊಂಡು ಚಿಂತಿಸುವಂತಾಗಿದೆ.