ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷವಾದ ತಿಲ್ಲಾನಾಭಿಷೇಕ ಪೂಜೆ ಸಲ್ಲಿಕೆ

VK NEWS
By -
0

ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ದಿವಾನರ ಪಾಳ್ಯದಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ, ಶ್ರೀ ಸ್ವಾಮಿಯ ಇಚ್ಛೆಯಾನುಸಾರ  ವಿಶೇಷವಾದ ತಿಲ್ಲಾನಾಭಿಷೇಕ ವ್ರತಪೂಜಾನುಷ್ಠಾನ ಸೇವೆಯನ್ನು ಇಂದು ನೆರವೇರಿಸಲಾಯಿತು.


 ಆಂಧ್ರ ಪ್ರದೇಶದ ರಾಜಮಂಡ್ರಿಯ ಶ್ರೀ ಸುಬ್ರಹ್ಮಣ್ಯ ಸಾಂಬಶಿವಾ ಸ್ವಾಮೀಜಿ ರವರ ಮಾರ್ಗದರ್ಶನದಲ್ಲಿ ಶ್ರೀ ಶನೇಶ್ವರ ಸ್ವಾಮಿ ಸೇವಾ ಸಮಿತಿ ಟ್ರಸ್ಟಿನ ವತಿಯಿಂದ ಆಯೋಜಿಸಲ್ಪಟ್ಟು, ಆಚಾರ್ಯರುಗಳಾದ ಶ್ರೀ ಶಿವಸೂರ್ಯ, ಶ್ರೀ ರಾಮಜಗನ್ನಾಥ ಸ್ವಾಮಿಗಳ ನಿರ್ವಹಣೆಯಲ್ಲಿ ಸಾರ್ವಜನಿಕರು ಐದು ದಶಕಗಳಿಗೊಮ್ಮೆ ಆಚರಿಸಲ್ಪಡುವ ಯೋಗಾನುಯೋಗದ ಈ ಸದಾವಕಾಶದ ಸುಸಂದರ್ಭದಲ್ಲಿ ಭಕ್ತಿ ಶ್ರದ್ದೆಗಳಿಂದ ಭಾಗವಹಿಸಿ ಪರಮಾತ್ಮನ ಕೃಪೆಗೆ ಪಾತ್ರರಾದರು. 

ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಡಾ. ಜಿ. ಎಸ್. ಚೌಧರಿರವರು ತಮ್ಮ ಧರ್ಮಪತ್ನಿ ಶ್ರೀಮತಿ ಸಂಧ್ಯಾ ಚೌಧರಿರವರುಗಳು ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಗುರುಗಳ ಮಾರ್ಗದರ್ಶನದಲ್ಲಿ ಭಕ್ತರೆಲ್ಲರ ಸಹಭಾಗಿತ್ವದಲ್ಲಿ ಸುಮಾರು 64 ಕೆಜಿ ಅಕ್ಕಿಯಲ್ಲಿ ತಿಲವನ್ನು ಬೆರೆಸಿ ಮಂತ್ರಘೋಷಗಳೊಂದಿಗೆ ವಿಶಿಷ್ಟವಾಗಿ ಸಿದ್ದಪಡಿಸಲಾದ ತಿಲ್ಲಾನ್ನವನ್ನು, ವೇದಮಂತ್ರೋಚ್ಚಾರಣೆಯೊಂದಿಗೆ ಶ್ರೀ ಶನೇಶ್ವರ ಸ್ವಾಮಿಯ ದಿವ್ಯ ಮಂಗಳ ಮೂರ್ತಿಗೆ ತಿಲ್ಲಾನಾಭಿಷೇಕವನ್ನು ನೆರವೇರಿಸಲಾಯಿತು. ಟ್ರಸ್ಟಿನ ವ್ಯವಸ್ಥಾಪಕರು ಶ್ರೀಮತಿ ರಾಧಾ ಶ್ರೀಧರ್ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು,

 ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಜನರು ಪಾಲ್ಗೊಂಡಿದ್ದರು.

Post a Comment

0Comments

Post a Comment (0)