ವೈದೇಹಿ ಫೌಂಡೇಶನ್ ನಿಂದ ಶ್ರೀ ಕೃಷ್ಣ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ

VK NEWS
By -
0

ಬೆಂಗಳೂರು ಜೂನ್ 2;    ಮಹಿಳಾ ಮತ್ತು ಮಕ್ಕಳ ಪೌಂಡೇಶನ್ ನ ನೂತನ ಕಾರ್ಯಕ್ರಮವಾದ ".ಶ್ರೀ ಕೃಷ್ಣ  ಅನ್ನ ದಾಸೋಹ" ಬಿತ್ತಿಪತ್ರ ಉದ್ಘಾಟನಾ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು.

ವೈದೇಹಿ ಮಹಿಳಾ ಮತ್ತು ಮಕ್ಕಳಾ ಫೌಂಡೇಶನ್ ನ ಬಿತ್ತಿಪತ್ರವನ್ನು  ಖ್ಯಾತ ಗಾಯಕಿ ರಾಜೇಶ್ ಕೃಷ್ಣನ್ ಬಿಡುಗಡೆಗೊಳಿಸಿದರು.

ಉಮಾ ಆರ್ಯ ಅವರು ಸ್ಥಾಪಿಸಿರುವ ವೈದೇಹಿ ಟ್ರಸ್ಟ್ ಮೂಲಕ ಶ್ರೀ ಕೃಷ್ಣ ಅನ್ನದಾಸೋಹ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು,ಶ್ಲಾಘನೀಯ, ವಿಶೇಷವಾಗಿ ಇಂತಹ ಕಾರ್ಯಕ್ರಮದಡಿ ಸಮಾಜಿಕ ಪಂಡ್ ಸಂಗ್ರಹ ಸಂಗ್ರಹಕ್ಕೆ ಮುಂದಾಗಿರುವುದು ನಾವೆಲ್ಲ ಮೆಚ್ಚುಗೆ ವ್ಯಕ್ತಪಡಿಸಬಹುದಾಗಿದೆ ಎಂದರು.

ವೈದೇಹಿ ಸಂಸ್ಥೆಯ ಮುಖ್ಯಸ್ಥೆ ಉಮಾ ಆರ್ಯ ಮಾತನಾಡಿ,ವೈದೇಹಿ ಪೌಂಡೇಶನ್ ಅನೇಕ ವರ್ಷಗಳಿಂದ ಅನೇಕ ಸಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ,ನಮ್ಮ ನೂತನ ಕಾರ್ಯಕ್ರಮವನ್ನು ರಾಜೇಶ್ ಕೃಷ್ಣನ್  ಉದ್ಘಾಟನೆ ಮಾಡಿರುವುದು ನಮ್ಮ ಸಾಮಾಜಿಕ ಸೇವಾ ಕಾರ್ಯಗಳಿಗೆ ಸ್ಪೂರ್ತಿ ತಂದಿದೆ ಎಂದು ತಿಳಿಸಿದರು.

ಚಿತ್ರನಟರಾದ ನಾಗೇಶ್ ಮಾತನಾಡಿ,ವೈದೇಹಿ ಸಂಸ್ಥೆಯ ಮೂಲಕ ರಾಜ್ಯ ಸರ್ಕಾರ ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಇದು ಶ್ಲಾಘನೀಯ, ಇವರ ಸಮಾಜಿಕ ಕಾರ್ಯಗಳಿಗೆ ಕೈಜೋಡಿಸೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ದಾನಿಗಳು, ಕಲಾವಿದರು  ಭಾಗವಹಿಸಿದ್ದರು.

Post a Comment

0Comments

Post a Comment (0)