ದೇವಸ್ಥಾನದಲ್ಲಿ ಮಂಗಳಾರತಿಯ ನಂತರ ಪೂಜಾರಿಯು ತಲೆಯ ಮೇಲಿಡುವ ಶಟಗೋಪ ಎಂದರೆ ಅತ್ಯಂತ "ರಹಸ್ಯ" ಅದನ್ನು ತಲೆಯ ಮೇಲೆ ಹಾಕುವ ಪುರೋಹಿತರಿಗೂ ಕೇಳಿಸದಂತೆ ಆಸೆಯನ್ನು ಆ ದೇವರಿಗೆ ನಿಧಾನವಾಗಿ ತಲುಪಿಸಬೇಕು.
ಅದ್ದರಿಂದ...ನಿನ್ನ ಅಪೇಕ್ಷೆ ಅಥವಾ ಕೋರಿಕೆಯೇ "ಶಟಗೋಪ"
ಮನುಷ್ಯನ ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ,ಮಾತ್ಸರ್ಯಗಳಿಂದ ದೂರವಿರುತ್ತೇನೆ ಎಂದು ನಮಸ್ಕರಿಸಿ ಪ್ರಮಾಣ ಮಾಡುವುದೇ ಅದರ ಇನ್ನೊಂದು ಅರ್ಥ. ನೀವು ದೇವಸ್ಥಾನಕ್ಕೆ ಹೋದಾಗಲೆಲ್ಲಾ ನಿಮ್ಮ ತಲೆಯ ಮೇಲೆ *ಶಟಗೋಪ* ಇಡಿಸಿಕೊಳ್ಳುವುದನ್ನು ಮರೆಯಬೇಡಿ.
ತಾಮ್ರ, ಕಂಚು ಮತ್ತು ಬೆಳ್ಳಿಯಿಂದ ಮಾಡಿದ ಶಟಗೋಪದ ಮೇಲೆ ಸಾಮಾನ್ಯವಾಗಿ ವಿಷ್ಣುವಿನ ಪಾದಗಳಿರುತ್ತವೆ. ಈ ಶಟಗೋಪವನ್ನು ತಲೆಯ ಮೇಲೆ ಹಾಕಿಕೊಂಡಾಗ ಈ ಲೋಹದಿಂದ ದೇಹದಲ್ಲಿನ ವಿದ್ಯುತ್ ಗೆ ತಾಗಿ *ಅನಾವಶ್ಯಕ ವಿದ್ಯುತ್* ದೇಹದಿಂದ ಹೊರಹೋಗುತ್ತದೆ. ಇದರಿಂದ ದೇಹದಲ್ಲಿ ಆತಂಕ, ಹೆಚ್ಚಿನ ಒತ್ತಡ ಮತ್ತು ಕೋಪ ಕಡಿಮೆಯಾಗುತ್ತದೆ.
ನಮ್ಮ ಹಿರಿಯರು ಮಾಡುವ ಪ್ರತಿಯೊಂದರ ಹಿಂದೆಯೂ ಹಲವು ವೈಜ್ಞಾನಿಕ ಕಾರಣಗಳಿವೆ.
🙏🚩