54ನೇ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು-ವರ ಸಮಾವೇಶ ಹಾಗೂ "ಶ್ರೀನಿವಾಸ ಕಲ್ಯಾಣೋತ್ಸವ"
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಕಲ್ಪ ವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂಗಳಸೂತ್ರ ಫೌಂಡೇಶನ್ , ಹಾಗೂ ಸಪ್ತಪದಿ ಫೌಂಡೇಶನ್ ಸಹಯೋಗದಲ್ಲಿ ಜೂನ್ 29 ಶನಿವಾರ ಹಾಗೂ 30 ಭಾನುವಾರ ವಧೂವರರ ಸಮಾವೇಶ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ.
ಉತ್ತರಹಳ್ಳಿಯ ಪೂರ್ಣಪ್ರಜ್ಞಾ ಲೇಔಟ್ ನಲ್ಲಿರುವ,ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿ ಮಠ, ಇಲ್ಲಿ 54ನೇ ರಾಜ್ಯ ಮಟ್ಟದ ತ್ರಿಮತಸ್ಥ ಬ್ರಾಹ್ಮಣ ವಧು-ವರರ ಸಮಾವೇಶ ನಡೆಯುತ್ತಿದ್ದು, ಅವಿವಾಹಿತರಿಗಾಗಿ ಶೀಘ್ರ ಮೇವ ಕಲ್ಯಾಣ ಪ್ರಾಪ್ತಿಗಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲಾಗುತ್ತಿದೆ. 10ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ಶ್ರೀ ಕಲ್ಪವೃಕ್ಷ - ಶ್ರೀ ರಾಘವೇಂದ್ರ ಸ್ವಾಮಿ ಸದ್ಭಾವನಾ ಪ್ರಶಸ್ತಿ ಹಾಗೂ ಎರಡು ದಿನಗಳ ವಧು ವರರ ಸಮಾವೇಶ ಏರ್ಪಡಿಸಲಾಗಿದೆ.
ಎಲ್ಲಾ ತ್ರಿಮತಸ್ಥ ಬ್ರಾಹ್ಮಣ ವಧು-ವರರೂ, ಪೋಷಕರೂ ಹಾಗೂ ಎಲ್ಲಾ ವಿದ್ಯಾರ್ಹತೆಯ ಆಸಕ್ತ ವಧು ವರರು ಭಾಗವಹಿಸಲು ಶ್ರೀನಿವಾಸ್ ಎಸ್ ಭಾರದ್ವಾಜ್ 9449425536/8217876335 ಸಂಪರ್ಕಿಸಲು ಕೋರಲಾಗಿದೆ.
ಶ್ರೀನಿವಾಸ್ ಭಾರದ್ವಾಜ್
ಪ್ರಧಾನ ಕಾರ್ಯದರ್ಶಿಗಳು 9449425536.