23.06.2024 ಭಾನುವಾರ - ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 50ವರ್ಷದ ಸುವರ್ಣ ಮಹೋತ್ಸವ

VK NEWS
By -
0

 ಜೂನ್ 23ರಂದು ಮಾನ್ಯ ರಾಜ್ಯಪಾಲರು, ಮುಖ್ಯಮಂತ್ರಿಗಳಿಂದ  ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 50ವರ್ಷದ ಸುವರ್ಣ ಮಹೋತ್ಸವ ಉದ್ಘಾಟನೆ​​​ 

ಬೆಂಗಳೂರು  :ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ತನ್ನ 5 ದಶಕಗಳ ಸಾರ್ಥಕ ಸೇವೆಯನ್ನು ಸದಸ್ಯರುಗಳಿಗೆ ಹಾಗೂ ಗ್ರಾಹಕರಿಗೆ ಸಲ್ಲಿಸಿ, ಈಗ ಸುವರ್ಣ ಮಹೋತ್ಸವವನ್ನು ಬೆಂಗಳೂರು ಅರಮನೆ ಮೈದಾನ, ಗೇಟ್‌ ನಂಬರ್‌ 6, ರಾಯಲ್‌ ಸೆನೆಟ್‌ ಇಲ್ಲಿ ದಿನಾಂಕ 23.06.2024 ರ ಭಾನುವಾರ ಬೆಳಗ್ಗೆ 10.00 ಗಂಟೆಗೆ ಸಂಭ್ರಮಾಚರಣೆ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.


ಈ ಕುರಿತು  ಬ್ಯಾಂಕಿನ ಸಂ‍ಸ್ಥಾಪಕರು ಹಾಗೂ ‍ಅಧ್ಯಕ್ಷರಾದ ಡಾ:ಕೆ.ಎಂ.ರಂಗಧಾಮಶೆಟ್ಟಿಯವರು ಉಪಾಧ್ಯಕ್ಷರಾದ  ಡಿ.ಆರ್.ವಿಜಯಸಾರಥಿರವರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷರಾದ ಡಿ.ಆರ್.ವಿಜಯಸಾರಥಿ ರವರು ಮಾತನಾಡಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟಿಡ್ 53ವರ್ಷಗಳ ಸಾರ್ವಜನಿಕರಿಗೆ ಸಾರ್ಥಕ ಸೇವೆ ಸಲ್ಲಿಸಿದೆ. ಒಬ್ಬರಿಂದ, ಒಬ್ಬರಿಗೆ ಸಹಕಾರ ನೀಡುವುದು ಸಹಕಾರ ನೀಡಿ ಅಭಿವೃದ್ದಿ ಪಥದತ್ತ ಸಾಗುವುದು.

ನಮ್ಮ ಬ್ಯಾಂಕ್ ನಲ್ಲಿ 35ಸಾವಿರ ಸದಸ್ಯರು ಇದ್ದಾರೆ. ರಂಗಧಾಮಶೆಟ್ಟಿರವರು ಸಂಸ್ಥಾಪನೆ ಮಾಡಿದರು, ಇಂದು ಬೆಂಗಳೂರಿನಲ್ಲಿ 9ಶಾಖೆಗಳು ಇದೆ, ಸಾರ್ವಜನಿಕರಿಗೆ ಉಪಯೋಗವಾಗಬೇಕು ಲಾಭಂಶವೇ ಮುಖ್ಯವಲ್ಲ ಎಂದು ಉದ್ದೇಶ.

ನಿಗದಿತ ಠೇವಣೆ ಇಡುವವರು ಬಹಳ ಮುಖ್ಯ, ಜನಗಳಿಂದ, ಜನರಿಗಾಗಿ ನಡೆಯುವ ಸಂಸ್ಥೆಯಾಗಿದೆ. ಗೃಹ ನಿರ್ಮಾಣ, ವಾಹನ ಸಾಲ, ವಿದ್ಯಾಭ್ಯಾಸಕ್ಕೆ ನಮ್ಮಲ್ಲಿ ಸರಳ ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಸಿಗುತ್ತಿದೆ.

ಗ್ರಾಹಕರ ಹಿತಾದೃಷ್ಟಿಯೆ ಮುಖ್ಯ. ನಿಗದಿತ ಠೇವಣೆ ಇಟ್ಟ ಗ್ರಾಹಕರಿಗೆ ಆಕರ್ಷಕ ಬಡ್ಡಿ ನೀಡುತ್ತಾ ಬಂದಿದೆ. ಸಾಲ ವಸೂಲಿ ಮತ್ತು ಠೇವಣೆ ದಾರರಿಗೆ ಬಡ್ಡಿ ನೀಡುವುದು ಸಮರ್ಪಕವಾಗಿ ನಡೆಯುತ್ತಿದೆ.

2001ನೇ ಇಸವಿಯಿಂದ ಸಂಕಷ್ಟದಲ್ಲಿ ಇದ್ದ ಬ್ಯಾಂಕ್  ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿ ಬ್ಯಾಂಕ್ ಉತ್ತಮ ಆರ್ಥಿಕ ಸ್ಥಿತಿ ಬರುವಲ್ಲಿ ಯಶ್ವಸಿಯಾಗಿ 9.5ಕೋಟಿ ರೂಪಾಯಿ ಲಾಭ ಪಡೆಯಿತು.

ಎನ್.ಪಿ.ಎ.ಸುಸ್ಥಿತಿಯಲ್ಲಿದೆ. ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. 2ಕೋಟಿ ರೂಪಾಯಿ ಸಾಲ ನೀಡಲು ಎರಡು ಕಡೆಗಳಿಂದ ಒಪ್ಪಿಗೆ ಪಡೆಯಲಾಗುತ್ತದೆ, ಕಟ್ಟುನಿಟ್ಟಿನ ನಿಯಾಮವಳಿ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತದೆ.

ಬ್ಯಾಂಕ್ ವತಿಯಿಂದ ಎರಡು ನೂತನ ಕಟ್ಟಡ ಖರೀದಿ ಮಾಡಲಾಗುತ್ತಿದೆ. ಷೆಡ್ಯೂಲ್ ಬ್ಯಾಂಕ್ ಮಾಡಲು ಹಾದಿಯಲ್ಲಿದೆ ಮತ್ತು ನೂತನವಾಗಿ ಹೊಸ ಶಾಖೆ ಮಾಡಲು  ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗಿದೆ.

ಜೂನ್ 23ರಂದು ಸುರ್ವಣ ಮಹೋತ್ಸವ ಸಮಾರಂಭವನ್ನು ಅಚರಿಸಲಾಗುತ್ತಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣರವರು, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ.ಪಾಟೀಲ್ ರವರು, ಲೋಕಸಭಾ ಸದಸ್ಯರಾದ ತೇಜಸ್ವಿಸೂರ್ಯ, ಶಾಸಕರಾದ ಉದಯ್ ಗರುಡಾಚಾರ್ ರವರು, ಸಹಕಾರ ಸಂಘದ ಅಧಿಕಾರಿಗಳು ಸುವರ್ಣ ಮಹೋತ್ಸವ ಸಮಾರಂಭಕ್ಕೆ ಉದ್ಘಾಟನೆ ಮಾಡಲಿದ್ದಾರೆ.

 ಆಡಳಿತ ಮಂಡಲಿಯ ಸದಸ್ಯರಗಳಾದ ಪಾಲನೇತ್ರಪ್ಪ ಎಂ.ಸಿ, ನಂಜೇಗೌಡ, ರವೀಂದ್ರ ಪಿ.ಕೆ, ಸುರೇಶ್ ಕುಮಾರ್, ವೆಂಕಟಚಲಪತಿ, ಮಾರುತಿ ಹೆಚ್. ಸತ್ಯಮೂರ್ತಿ, ರುದ್ರಮೂರ್ತಿ, ರವಿ.ಕೆ, ನಾಗಭೂಷಣ್, ಮಹಾಲಕ್ಷ್ಮಿ, ಜಯಲಕ್ಷ್ಮಿ, ಅನಪೂರ್ಣರವರು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಸಲಹೆಗಾರರಾದ ನಾಗರಾಜುರವರು  ಉಪಸ್ಥಿತರಿದ್ದರು.

Post a Comment

0Comments

Post a Comment (0)