ಕನ್ನಡಿಗರು ಕನ್ನಡ ವ್ಯಸನಿಗಳಾದರೆ ಕನ್ನಡದ ಭವಿಷ್ಯ ಉಜ್ವಲ - ಡಾ.ಎಲ್. ಹನುಮಂತಯ್ಯ

VK NEWS
By -
0
ರಾಜಧಾನಿ ಬೆಂಗಳೂರಿನಲ್ಲಿ ಇಂದು ಇಷ್ಟಾದರೂ ಕನ್ನಡ ಕೇಳುತ್ತಿದ್ದರೆ ಅದಕ್ಕೆ ಕನ್ನಡ ಹೋರಾಟಗಾರರೇ ಕಾರಣ.  ಸರ್ಕಾರ ಮತ್ತು ಕನ್ನಡಿಗರು ಗಮನಿಸಬೇಕು, ಹಾಗೇ ಕನ್ನಡ ಹೋರಾಟಗಾರರೂ ಕನ್ನಡ ಹೋರಾಟ ಯಾವುದೇ ಭಾಷೆ ಜನರ ವಿರುದ್ದ ಅಲ್ಲ ಕನ್ನಡದ ಹಿತರಕ್ಷಿಸಲು ಎಂಬುದನ್ನು ಮರೆಯ ಬಾರದು, ಹಾಗೇ ಪರಭಾಷಿಕರು ಕನ್ನಡಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲಾಗದು ಎಂದು ಖ್ಯಾತ ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾಕ್ಟರ್ ಎಲ್ ಹನುಮಂತಯ್ಯ ನವರು ‘ಕನ್ನಡ ತೇಜಸ್ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.


ಎಚ್.ಎ.ಎಲ್.ನ ಎಲ್‌ಸಿಎ(ತೇಜಸ್) ವಿಭಾಗದ  ತೇಜಸ್ ಕನ್ನಡ ಸಂಘವು  ಸ್ಥಾಪಿಸಿರುವ ೧೦,೦೦೦ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡ ವಾರ್ಷಿಕ "ಕನ್ನಡ ತೇಜಸ್ ಪ್ರಶಸ್ತಿ’ಯನ್ನು  ಎಂಬ ಪ್ರಶಸ್ತಿಯನ್ನು ಫಲ-ತಾಂಬೂಲಗಳೊಂದಿಗೆ ಡಾ. ಎಲ್ ಹನುಮಂತಯ್ಯನವರಿಗೆ ಅವರ ಮನೆಯಗೆ ತೆರಳಿ ಸಂಘದ ಪದಾಧಿಕಾರಿಗಳು  ೦೫.೦೫.೨೦೨೪ರ ಭಾನುವಾರದಂದು ಪ್ರದಾನ ಮಾಡಿದರು.

ಕೈಗಾರಿಕೆ, ಬ್ಯಾಂಕ್  ಕನ್ನಡ ಸಂಘಗಳು ನಾಡು ನುಡಿಯ ರಕ್ಷಣೆಗೆ ಶ್ರಮಿಸುತ್ತಲೇ  ಕನ್ನಡ ಸಾಹಿತ್ಯ- ಸಂಸ್ಕೃತಿಗಳಿಗೆ ದೊಡ್ಡ ದೇಣಿಗೆ ನೀಡಿವೆ. ಎಲ್ಲರಿಗೂ ಒಂದೊAದು ವ್ಯಸನವಿರುತ್ತದೆ ಹಾಗೆ ನನಗೆ ಕನ್ನಡವೇ ವ್ಯಸನವಾಗಿದೆ. ಪ್ರತಿಯೊಬ್ಬ ಕನ್ನಡಿಗರಿಗೂ ಕನ್ನಡದ ವ್ಯಸನವಿರಬೇಕು ಆಗ ಕನ್ನಡದ ಬಗ್ಗೆ ಕೇಳಿಬರುವ ಆತಂಕದ ಮಾತುಗಳಿಗೆ ವಿರಾಮ ಬೀಳುತ್ತದೆ ಎಂದು ಹೇಳಿ ನಿಮ್ಮಂತಹವರು ಕನ್ನಡ ವ್ಯಸನಿಗಳಾಗಿರುವುದರಿಂದಲೇ ನಿಮ್ಮ ಬೆವರಿನ ಹಣದಿಂದ ಕನ್ನಡ ಸಂಘದ ಚಟುವಟಿಕೆ ಮತ್ತು ಕನ್ನಡ ಕಾಯಕ ನಡೆಸುತ್ತಿರುವುದು ಎಂದು ಶ್ಲಾಘಿಸಿದರು.  ಇಂತಹ ಕನ್ನಡ ಸಂಘಗಳಿಗೆ ರಾಜ್ಯ ಸರ್ಕಾರ ನೆರವಾಗಬೇಕು, ಕನ್ನಡಿಗರು ಸಿಗುವ ಎಲ್ಲ ಸವಲತ್ತುಗಳನ್ನು ಸಕಾಲದಲ್ಲಿ ಬಳಸಿಕೊಳ್ಳಬೇಕು. ಎಂದು ಮನವಿ ಮಾಡಿದರು.

 

ಕನ್ನಡ ಹೋರಾಟಗಾರರನ್ನು ಸರ್ಕಾರ ಗುರುತಿಸಲಿ

 

            ಭಾಷೆ-ಸಂಸ್ಕೃತಿಗಳಿಗೆ ಹೆಚ್ಚು ಹಣ ಮಿಸಲಿಟ್ಟಿರುವ ಮತ್ತು ಸಾಧಕರನ್ನು ಗುರುತಿಸುವಲ್ಲಿ ಕರ್ನಾಟಕ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗಿಂತ ಮುಂಚೂಣಿಯಲ್ಲಿದೆ. ಆದರೆ, ಕನ್ನಡನಾಡು-ನುಡಿಯ ರಕ್ಷಣೆಗೆ ದೊಡ್ಡ ತ್ಯಾಗ ಮಾಡಿರುವ ಕನ್ನಡ ಹೋರಾಟಗಾರರನ್ನು ಗುರುತಿಸುತ್ತಿಲ್ಲ. ಈ ಕೊರತೆಯನ್ನು ಗಮನಿಸಿ ಕನ್ನಡನಾಡು-ನುಡಿಯ ಉತ್ಕರ್ಷಕ್ಕೆ ಶ್ರಮಿಸಿದವರಿಗೆ ಮೀಸಲಾದ ‘ಕನ್ನಡ ತೇಜಸ್ ಪ್ರಶಸ್ತಿ’ಯನ್ನು ಸ್ಥಾಪಿಸಿರುವ ಕನ್ನಡ ಸಂಘದ ಕಾರ್ಯ ಅಬಿನಂದನೀಯ ಎಂದು ಪ್ರಶಸ್ತಿಯನ್ನು ಪ್ರದಾನ ಮಾಡಿದ ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ಹೇಳಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕನ್ನಡ ಹೋರಾಟಗಾರರ ಕನ್ನಡ ಕಾಯಕವನ್ನು ಗುರುತಿಸಲಿ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹನುಮಂತಯ್ಯನವರು ಕನ್ನಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನಿಸಿದರು. ಮಹಿಷಿ ವರದಿ ಪರಿಷ್ಕರಣ, ಸರ್ಕಾರಿಶಾಲೆಗಳ ಸಬಲೀಕರಣ ಸಮಿತಿ, ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಕಲಿಕೆಯಂತಹ ಕ್ರಿಯಾತ್ಮಕ ಕನ್ನಡ ಕೆಲಸ ಮಾಡಿದ ಎಲ್.ಎಚ್. ಅವರಿಗೆ ಪ್ರಶಸ್ತಿ ನೀಡಿರುವುದು ಸಾರ್ಥಕವಾದ ಕೆಲಸ ಎಮದರು

 

ಸಂಘದ ಅಧ್ಯಕ್ಷ ಚಂದ್ರಶೇಖರಪ್ಪ ಎಂ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಗಳಾದ ಉಮಾಶಂಕರ ಎಚ್.ಎಸ್ ವಂದನೆ ಸಲ್ಲಿಸಿದರು. ಹನುಮಂತಯ್ಯನವರ ಪತ್ನಿ ವಿಜಯಾಬಿಕೆ, ಎಚ್.ಎ.ಎಲ್. ಕೇಂದ್ರೀಯ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಡಿ ದೇವರಾಜ್ ,ಸಂಘದ ನಿಕಟ ಪೂರ್ವ ಅಧ್ಯಕ್ಷ ಮನುಕುಮಾರ್ ಎಸ್ ಆರ್, ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)