ಗ್ರಾಹಕರ ಸುರಕ್ಷತೆಯೇ ನಮ್ಮ ಆದ್ಯತೆ ಎನ್ನುತ್ತಿದ್ದ ರಾಮೇಶ್ವರಂ ಕೆಫೆಯಲ್ಲಿ ಸಿಕ್ಕಿದ್ದೇನು ಗೊತ್ತೇ?

VK NEWS
By -
0

 ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಬಾಂಬ್ ಬ್ಲಾಸ್ಟ್ ಆಗಿತ್ತು.   ಈ ಸ್ಫೋಟವನ್ನು ಬಾಂಬ್ ಸ್ಫೋಟ ಎಂದು ಡಿಜಿಪಿ ಅಲೋಕ್ ಮೋಹನ್ ಅವರು ಖಚಿತಪಡಿಸಿದ್ದರು. 

ಎಫ್ ಎಸ್ ಎಲ್ ತಂಡ ಮತ್ತು ಪೊಲೀಸರ ತಂಡ ಸ್ಥಳ ಪರಿಶೀಲನೆ ನಡೆಸಿ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸುಮಾರು ಎಂಟು ಜನರಿಗೆ ಗಾಯಗಳಾಗಿತ್ತು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು.  

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಹಿಂದೆ 'ಐಸಿಸ್' ಕೈವಾಡವಿರುವ ಬಗ್ಗೆ ಬಲವಾದ ಶಂಕೆ ಹೊಂದಿರುವ ಎನ್ಐಎ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಾಲ್ವರು ಐಸಿಸ್ ಶಂಕಿತ ಉಗ್ರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. 

ಬಳ್ಳಾರಿ ಐಸಿಸ್ ಮಾಡ್ಯುಲ್ ಕೇಸ್ನ ಆರೋಪಿಗಳಾದ ಮಿನಾಜ್ ಅಲಿಯಾಸ್ ಸುಲೇಮಾನ್ (26), ಸೈಯದ್ ಸಮೀರ್ (19), ಮುಂಬಧಿಯಿನ ಅನಾಸ್ ಇಕ್ಬಾಲ್ ಶೇಖ್ (23), ದಿಲ್ಲಿಯ ಶಯಾನ್ ಅಲಿಯಾಸ್ ಹುಸೇನ್ (26)ರನ್ನು ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.  ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಿರುವ ಐಇಡಿಯಲ್ಲಿ ಅಮೋನಿಯಂ ನೈಟ್ರೇಟ್ ಬಳಸಿರುವುದು ಧೃಡಪಟ್ಟಿದೆ. 

ಜತೆಗೆ, ಐಸಿಸ್ ನಂಟಿದ್ದ ಉಗ್ರರು ಮಾತ್ರವೇ ಇತ್ತೀಚಿನ ದಿನಗಳಲ್ಲಿ ಐಇಡಿ ತಯಾರಿಕೆಯಲ್ಲಿ ಬಳಸುತ್ತಿದ್ದರು.

ಇತ್ತ ಮಾಧಾಪುರ್ ನಲ್ಲಿರುವ ರಾಮೇಶ್ವರಂ ಕೆಫೆ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿನ ಆಹಾರ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದ್ದಾರೆ. 

ಈ ಸಂದರ್ಭದಲ್ಲಿ ಅವಧಿ ಮುಕ್ತಾಯವಾದ 100 ಕೇಜಿ ಕಪ್ಪು ಹೆಸರು ಕಾಳು, 10 ಕೇಜಿ ನಂದಿನಿ ಮೊಸರು, 8 ಲೀಟರ್ ಹಾಲು, ಬೆಲ್ಲ, ತುಪ್ಪ ಮೊದಲಾದ ವಸ್ತುಗಳು ಪತ್ತೆಯಾಗಿವೆ. ಆಹಾರ ಸುರಕ್ಷತಾ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಫೆ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ನಮ್ಮ ಹೈದರಾಬಾದ್ ನಲ್ಲಿರುವ ಕೆಫೆಯಲ್ಲಿ ಅಧಿಕಾರಿಗಳು ನಡೆಸಿದ  ಅವಲೋಕನಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಸೇವೆ ಮತ್ತು ನೈರ್ಮಲ್ಯದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಗ್ರಾಹಕರ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆಯಾಗಿದೆ.  ಈ ಬಗ್ಗೆ  ಪರಿಶೀಲಿಸುತ್ತಿದ್ದೇವೆ. ತನಿಖೆಗೆ ಸಹಕರಿಸುತ್ತೇವೆ ಎಂದಿದ್ದಾರೆ. 

ಆದರೆ ಈ ಬಗ್ಗೆ ಕೆಫೆ ಸಿಬ್ಬಂದಿ ಹೇಳುವುದೇನೆಂದರೆ, ಇದನ್ನು ಅಡುಗೆಗೆ ಬಳಸಲು ಇಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಕೆಫೆ ಮಾಲೀಕರು ಕೂಡ ಪತ್ತೆಯಾದ ವಸ್ತುಗಳನ್ನು ಬಳಕೆಗೆ ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಶುಚಿ ರುಚಿಗೆ ಇಲ್ಲಿದೆ ವಿಶೇಷ ಎನ್ನುತ್ತಿದ್ದ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಅವಘಡ ನೋಡಿದರೆ ಸಾರ್ವಜನಿಕರಿಗೆ ನುಂಗಲಾರದ ನೋವಂತಾಗಿದೆ....

-ರಕ್ಷಿತಾ. ಎಸ್.

Post a Comment

0Comments

Post a Comment (0)