ಬೆಂಗಳೂರು :ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ.) ಪುತ್ತೂರು, ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು, ಶ್ರೀ ಕೃಷ್ಣ ಯುವಕ ಮಂಡಲ (ರಿ.) ಸಿಟಿಗುಡ್ಡೆ ಪುತ್ತೂರು ಇದರ ವತಿಯಿಂದ ಕುಮಾರಿ ಹೃದ್ಯಾ ಭಟ್ ಕೆ. ಅವರ ಸಾಧನೆಯನ್ನು ಗುರುತಿಸಿ "ಬೆಂಗಳೂರಿನ ಹೆಮ್ಮೆಯ ಮನೆ ಮಗಳು" ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.
ಕುಮಾರಿ ಹೃದ್ಯಾ ರವರ ಮನೆಯಲ್ಲಿ ನಡೆದ ಚೊಕ್ಕದಾದ ಕಾರ್ಯಕ್ರಮದಲ್ಲಿ ಬಿ. ರಾಜೀವ ಗೌಡ, ಮನೋಹರ್,ಕಲಾವಿದ ಕೃಷ್ಣಪ್ಪ ಶಿವನಗರ,ನವೀನ್ ಪುತ್ತೂರು ಇವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಅಮೃತ ಸ್ಕೂಲ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಯುತ ರಾಜೇಶ್ ಕೋಟೆ ಅವರು ಕುಮಾರಿ ಹೃದ್ಯಾರನ್ನು ಪೇಟ, ಶಾಲು, ಹಾರ, ಸನ್ಮಾನ ಪತ್ರ, ಫಲಗುಚ್ಛದೊಂದಿಗೆ ಸನ್ಮಾನಿಸಿ ಇನ್ನಷ್ಟು ಕೀರ್ತಿ ಸಿಗಲಿ ಎಂದು ಹಾರೈಸಿದರು.