ಅನಾದಿಕಾಲದಿಂದಲೂ ಸಪಲಮ್ಮ ತಾಯಿ ಜಾತ್ರಾ ಮಹೋತ್ಸವ ನಡೆಸಿಕೊಂಡು ಬಂದಿದ್ದೇವೆ:ವಿ.
-ಶಾಂತ್ ಕುಮಾರ್
ದೇವನಹಳ್ಳಿ : ದೇವತಾಕಾರ್ಯಗಳು ,ಜಾತ್ರೆಗಳು ಗ್ರಾಮಗಳ ಒಂದು ಪ್ರಮುಖ ಪರಂಪರೆ, ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಮಹೋತ್ಸವ ಹಾಗಾಗಿ ಅನಾದಿಕಾಲದಿಂದಲೂ ದ್ಯಾವರಹಳ್ಳಿ ಗ್ರಾಮ ದೇವತೆ ಶ್ರೀ ಸಪಲಮ್ಮ ತಾಯಿ ಜಾತ್ರಾ ಮಹೋತ್ಸವ ನಡೆಸಿಕೊಂಡು ಬಂದಿದ್ದೇವೆ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿ.ಶಾಂತ್ ಕುಮಾರ್ ಹೇಳಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ದ್ಯಾವರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ದೇವತೆ ಶ್ರೀ ಸಪಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ತಾಯಿಯ ಆರ್ಶೀವಾದ ಪಡೆದು ಮಾತನಾಡಿದರು.
ಇಂದಿನ ಯುವಜನತೆಯು ಸಹ ಹೆಚ್ಚಾಗಿ ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಧನಾತ್ಮಕ ಚಿಂತನೆಗಳನ್ನು ಬೆಳಸಿಕೊಳ್ಳಬೇಕು ಹಾಗೂ ಮುಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಧಾರ್ಮಿಕ ನಂಭಿಕೆಗಳು ಮತ್ತು ಪರಂಪರೆಯ ಬಗ್ಗೆ ಮನವರಿಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ, ನಮ್ಮ ಮನೆಯ ದೇವರಾದ ಮತ್ತು ಗ್ರಾಮ ದೇವತೆಯಾದ ಶ್ರೀ ಸಪ್ಲಮ್ಮ ದೇವಿಯು ಎಲ್ಲರಿಗೂ ಒಳ್ಳೆಯದು ಮಾಡಲಿ ,ಕಾಲ ಕಾಲಕ್ಕೆ ಮಳೆ ಬೆಳೆ ಚೆನ್ನಾಗಿ ಆಗಲಿ, ದೇವಿಯ ಆಶೀರ್ವಾದ ಪಡೆದ ಪ್ರತಿಯೊಬ್ಬ ಭಕ್ತಾದಿಗಳಿಗೂ ತಾಯಿಯ ಕೃಪೆಯಿಂದ ಒಳ್ಳೆಯದಾಗಲಿ ಎಂದು ಇದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಡಿಸಿ ಚಂದ್ರುರವರ ಕುಟುಂಬಸ್ಥರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದರು ಹಾಗೂ ಶಾಂತಕುಮಾರ್ ಕುಟುಂಬಸ್ಥರಾದ ಗೌರಮ್ಮಶಾಂತಕುಮಾರ್ ವೆಂಕಟಪ್ಪ, ಕವಿತಾ ನಾರಾಯಣಸ್ವಾಮಿ, ಸರಸ್ವತಿ,ತ್ರಿಶಾಂತಿ, ಗಗನ್, ಪವನ್ ,ಗೌತಮ್ ಕುಮಾರ್ ಮುಖಂಡರುಗಳಾದ ಪ್ರಸನ್ನ ಕುಮಾರ್,ಸಂಪಗಿಗೌಡ, ನಾಗೇಗೌಡ, ಹರ್ಷಿತ್ ಗೌಡ ಸೇರಿದಂತೆ ಹಲವಾರು ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ದ್ಯಾವರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ದೇವತೆ ಶ್ರೀ ಸಪಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ತಾಯಿಯ ಆರ್ಶೀವಾದ ಪಡೆದು ಮಾತನಾಡಿದರು.