ಆನೇಕಲ್: ಆ ಕೆರೆಯಲ್ಲಿ ನೀರು ಇದ್ರೂ ಕೂಡ ಅದರ ಅಸ್ತಿತ್ವ ವನ್ನ ಕೆರೆ ಕಳೆದುಕೊಂಡಿದೆ.. ಅದರಲ್ಲೂ, ರಾತ್ರೋರಾತ್ರಿ . ಅಪಾರ್ಟ್ಮೆಂಟ್ ಮತ್ತು ಕೈಗಾರಿಕಾ ಪ್ರದೇಶ ಗಳಿಂದ ಬಿಡುವ ರಾಸಾಯನಿಕ ಕೆಮಿಕಲ್ ವಾಟರ್ ನೀರು ಸಂಪೂರ್ಣವಾಗಿ ಕಲುಷಿತ ಗೊಳ್ಳುವ ಜೊತೆಗೆ ಅಂತರ್ಜಾಲ ಸಹ ಮಲಿನವಾಗುತ್ತಿದೆ.. ಜನ ಜಾನುವಾರುಗಳಿಗೂ ಸಹ ಕೆರೆನೀರು ಯೋಗ್ಯವಾಗದೆ ಹಾಳಾಗುತ್ತಿದೆ ...ಅಷ್ಟಕ್ಕೂ ಆ ಕೆರೆ ಯಾವುದು ಅಂದ್ರ ..
ಒಂದು ಕಡೆ ಕಣ್ಣಾಯಿಸಿದೆಷ್ಟು ದೂರ ಕಾಣುವ ಕೆರೆಯ ನೀರು... ಮತ್ತೊಂದು ಕಡೆ ಕಲುಷಿತ ಕಪ್ಪು ನೀರು ...ಆ ಕಪ್ಪು ನೀರಿನಲ್ಲಿ ವಿಷಪೂರಿತ ಹಾಲಿನಂತಹ ನೊರೆ.. ಚರಂಡಿ ಮೂಲಕ ನೀರನ್ನು ಕೆರೆಗೆ ಹರಿಸುತ್ತಿರುವ ಅಪಾರ್ಟ್ಮೆಂಟ್.. ಅಂದ್ಹಾಗೆ ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಕೃಷ್ಣಪುರ ಕೆರೆಯಲ್ಲಿ...ಹೌದು ಒಂದು ಕಾಲದಲ್ಲಿ ಇಡೀ ಊರಿಗೆ ನೀರನ್ನು ಪೂರೈಕೆ ಮಾಡುತ್ತಿದ್ದ ಕೆರೆ ಈಗ ಸಂಪೂರ್ಣವಾಗಿ ಕೆಮಿಕಲ್ ವಾಟರ್ ನಿಂದ ಕೂಡಿದೆ .. ಅದಲ್ದೆ ಸುತ್ತಮುತ್ತ ಇರುವ ಅಪಾರ್ಟ್ಮೆಂಟ್ ಎಸ್‌ಟಿಪಿ ಡ್ರೈನೇಜ್ ನೀರು ಬಿಟ್ಟ ಪರಿಣಾಮ ಕೆರೆಯಲ್ಲಿದ್ದ ಮೀನುಗಳು ಮಾರಣಹೋಮ ಆಗಿದ್ದು ಗೊಬ್ಬುನಾರ್ತಿದೆ .. ಇನ್ನು ಅಪಾರ್ಟ್ಮೆಂಟ್ ಗಳಿಂದ ಕಳಿಸಿದ್ದ ನೀರು ಮತ್ತು ಕೆರೆಗೆ ಸೇರುತ್ತಿರುವುದರಿಂದ ಗ್ರಾಮಸ್ಥರು ಅಪಾರ್ಟ್ಮೆಂಟ್ನ ಮುಂಭಾಗ ಪ್ರತಿಭಟನೆ ನಡೆಸಿದ್ದರು.. ರವಿ ಸ್ಥಳಿ ನಿವಾಸಿ- ಇನ್ನು ಇಲ್ಲಿನ ಕಾರ್ತಿಕ್ ರೆಡ್ಡಿ ಅವರ ಮಾಲೀಕತ್ವದ
ಅಶ್ವಿನಿ ಸೀತಾರಾಮ್ ಅಪಾರ್ಟ್ಮೆಂಟ್ ಮತ್ತು ರಾಮಧನ್ ಕೈಗಾರಿಕಾ ಫ್ಯಾಕ್ಟರಿ
ಮರಸೂರು ಪಾಮ್ ಗ್ರೂಪ್,
ರಿಚ್ಮಂಡ್ ಲೇಖ ಅಪಾರ್ಟ್ಮೆಂಟ್,
ಸಿಪಾನಿ ಅಪಾರ್ಟ್ಮೆಂಟ್, ಒಳಚರಂಡಿ ನೀರು ಮತ್ತು ಎಸ್ ಟಿ ಪಿ ರಾಸಾಯನಿಕ ಕೆಮಿಕಲ್ ನೀರು ಕೆರೆ ಸೇರುತ್ತದೆ ಇನ್ನು ಈ ಹಿಂದೆ ಕೆರೆ ಸುತ್ತಮುತ್ತ ಗಿಡಕಂಟೆ ಮತ್ತು ಮರಗಳನ್ನು ತೆರವು ಮಾಡಿ ಸ್ವಚ್ಛಗೊಳಿಸಲಾಗಿತ್ತು.. ಇನ್ನು ಈ ಬಗ್ಗೆ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಮಾತನಾಡಿ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಅಪಾರ್ಟ್ಮೆಂಟ್ ಗಳಿಗೆ ನೋಟಿಸ್ ನೀಡಿದ್ದೇವೆ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರಮೇಶ್ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು-
ಇನ್ನು ಇಲ್ಲಿನ ಅಪಾರ್ಟ್ಮೆಂಟ್ ಸುತ್ತಮುತ್ತ ಕಾಲುವೆಗಳ ಮೂಲಕ ರಾಸಾಯನಿಕ ನೀರನ್ನು ಕೆರೆಗೆ ಹರಿಸುತ್ತಿರುವ ಪರಿಣಾಮ ಈಗ ಕೆರೆಗೆ ಗಬ್ಬುದ್ದು ಹೋಗಿದೆ ..ಇನ್ನು ಕೆಲವರು ಒಳಚರಂಡಿ ನೀರನ್ನು ಕೆರೆಗೆ ಹರಿಸುತ್ತಿದ್ದಾರೆ.. ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ..