ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

VK NEWS
By -
0

 ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ದೊಡ್ಡಬಳ್ಳಾಪುರ - ಬೆಂಗಳೂರು ಹೆದ್ದಾರಿಯ ಹೊಸಹುಡ್ಯಾ ಸಮೀಪದಲ್ಲಿ 46ನೇ ಡಿಪೋನ ಬಿಎಂಟಿಸಿ ಬಸ್ನ್ ಸಂಖ್ಯೆ KA57F3133ಯ ಮುಂಭಾಗದ ಟೈರ್ ಆಕಸ್ಮಿಕವಾಗಿ ಒಡೆದು ಹೋಗಿರುತ್ತದೆ.

 ಬಸ್ ಚಾಲನಕನ ಸಮಯಪ್ರಜ್ಞೆ ಯಿಂದ ಯಾವುದೇ ಅನಾಹುತ ಸಂಭವಿಸದೆ ನೂರಾರು ಪ್ರಯಾಣಿಕರ ಪ್ರಾಣ ಸುರಕ್ಷಿತವಾಗಿದೆ. 

ಬಸ್ನ್ ಟೈರ್ ಸಾಕಷ್ಟು   ಸವೆದಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಟೈರ್ ಅನ್ನು ಬದಲಾವಣೆ ಮಾಡದೇ ಇಂದು ಚಾಲನೆ ಮಾಡಲು ಅನುಮತಿ ನೀಡಿ ತೀವ್ರ ನಿರ್ಲಕ್ಷ್ಯ ವಹಿಸಿರುತ್ತಾರೆ ಎಂದು ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Post a Comment

0Comments

Post a Comment (0)