ಬೆಂಗಳೂರು:. ಯಶವಂತಪುರ ವೃತ್ತದ ಬಳಿಯಿರುವ ಪ್ರಸಿದ್ಧ ಶ್ರೀ ದಾರಿ ಆಂಜನೇಯ ಸ್ವಾಮಿ ದೇಗುಲದ ಮುಂಭಾಗದಲ್ಲೇ ರಸ್ತೆಯಗಲಕ್ಕೂ ದುರ್ನಾತ ಬಿರುತ್ತಾ ಹರಿಯುವ ಕೊಳಚೆ ನೀರಿನ ಅವಾಂತರದಿಂದ ಈ ರಸ್ತೆಯಲ್ಲಿ ಜನರು ಹೆಜ್ಜೆ ಇಡುವುದೇ ದುಸ್ತರವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಿಬಿಎಂಪಿ ವಾರ್ಡ್ ಸಂಖ್ಯೆ 45 ರ ವ್ಯಾಪ್ತಿಗೆ ಸೇರುವ ಈ ಜಾಗವು ಮುಖ್ಯ ರಸ್ತೆಗೆ ಹೊಂದಿಕೊಂದಿದ್ದರೂ, ಸಂಬಂಧ ಪಟ್ಟ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸುತ್ತಿದೆ ಎಂದರೆ ಇನ್ನು ಒಲಭಾಗದ ರಸ್ತೆಗಳಲ್ಲಿ ಈ ರೀತಿಯ ಸಮಸ್ಯೆ ಉಂಟಾದರೆ ಗತಿಯೇನು ಎಂಬುದು ಜನರ ಪ್ರಶ್ನೆ?