.ಮಾನವನ ಮೆದುಳು ಪುನಶ್ಚೇತನಗೊಳಿಸುವ “ರೀಬೂಟಿಂಗ್ ದಿ ಬ್ರೈನ್ ಪಾರ್ಟ್ 1 – ದಿ ಜರ್ನಿ ಆಪ್ ಹೋಪ್” ವೈದ್ಯಕೀಯ ಕೃತಿ ಲೋಕಾರ್ಪಣೆ

VK NEWS
By -
0

ದೇಶದಲ್ಲಿ ಮೊದಲ ಬಾರಿಗೆ ಮೆದುಳು ಕುರಿತ ನೊವಲ್ಕಾನ್ 2024 – ನ್ಯೂರೋ ಟೆಕ್ಕಾನ್ ಸಮ್ಮೇಳನ ಆಯೋಜನೆ - 

ಮೆದುಳು ಕಾರ್ಯನಿರ್ವಹಣೆ” ವಲಯದಲ್ಲಿ ಹಲವಾರು ವಿನೂತನ ಪ್ರಯೋಗಗಳು ನಡೆಯುತ್ತಿವೆ - ಜಪಾನ್ ನ ಖ್ಯಾತ ನರರೋಗ ತಜ್ಞ ಡಾ.ತಕಯೋಮಿ ತೈರಾ


ಬೆಂಗಳೂರು, ಮೇ, 19: ವೈದ್ಯಕೀಯ ಕ್ಷೇತ್ರದಲ್ಲಿ ಮೆದುಳಿಗೆ ಸೂಕ್ತ ಚಿಕಿತ್ಸೆ ನೀಡುವ ತಂತ್ರಜ್ಞಾನದಲ್ಲಿ ಪ್ರಗತಿಯಾಗಿದ್ದು, “ಮೆದುಳು ಕಾರ್ಯನಿರ್ವಹಣೆ” ವಲಯದಲ್ಲಿ ಹಲವಾರು ವಿನೂತನ ಪ್ರಯೋಗಗಳು ನಡೆಯುತ್ತಿವೆ ಎಂದು ಜಪಾನ್ ನ ಖ್ಯಾತ ನರರೋಗ ತಜ್ಞ ಡಾ.ತಕಯೋಮಿ ತೈರಾ ಹೇಳಿದ್ದಾರೆ. 

ನಗರದ ನಿಮ್ಹಾನ್ಸ್ ಸಂಸ್ಥೆಯ ಸಭಾಂಗಣದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಮೆದುಳು ಕುರಿತ ನೊವಲ್ಕಾನ್ 2024 – ನ್ಯೂರೋ ಟೆಕ್ಕಾನ್ ಸಮ್ಮೇಳನದಲ್ಲಿ ಪಿ.ಆರ್.ಎಸ್. ನ್ಯೂರೋ ಸೈನ್ಸ್ಸಸ್ ಸಂಸ್ಥೆಯಿಂದ ಖ್ಯಾತ ನರರೋಗ ತಜ್ಞರಾದ ಡಾ. ಶರಣ್ ಶ್ರೀನಿವಾಸ್ ಮತ್ತು ಡಾ. ಪ್ರತಿಭಾ ಶರಣ್ ಅವರ ಮೆದುಳನ್ನು ಪುನಶ್ಚೇನಗೊಳಿಸುವ ಅತ್ಯಂತ ವಿರಳ ಮತ್ತು ವೈಶಿಷ್ಟ್ಯಗಳನ್ನೊಳಗೊಂಡ ರೀಬೂಟಿಂಗ್ ದಿ ಬ್ರೈನ್ ಪಾರ್ಟ್ 1 – ದಿ ಜರ್ನಿ ಆಪ್ ಹೋಪ್” ಎಂಬ ವೈದ್ಯಕೀಯ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮೆದುಳು ನರಗಳ ಎಳೆಗಳನ್ನು ಒಳಗೊಂಡಿದ್ದು, ಆಘಾತ, ಅಪಘಾತಗಳ ಸಂದರ್ಭದಲ್ಲಿ ನಿಷ್ಕ್ರೀಯವಾಗುವ ಮೆದುಳನ್ನು ಸೂಕ್ತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಮೂಲಕ ಪುನಶ್ಚೇತನಗೊಳಿಸಬಹುದು. ಇಂತಹ ಹಲವಾರು ಯಶೋಗಾಥೆಗಳಿವೆ. ಪಾರ್ಶ್ವವಾಯು, ಪಾರ್ಕಿನ್ ಸನ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದರು. 

ಡಾ. ಶರಣ್ ಶ್ರೀನಿವಾಸ್ ಮಾತನಾಡಿ,  ಚಿಕಿತ್ಸೆಯ ನಂತರವೂ ರೋಗಿಯನ್ನು ಮುಖ್ಯವಾಹಿನಿಗೆ ತರುವ ಮಹತ್ವದ ಉದ್ದೇಶವನ್ನು ಇದು ಒಳಗೊಂಡಿದೆ. ಆರೋಗ್ಯ ವೃತ್ತಿಪರರು, ವಿದ್ಯಾರ್ಥಿಗಳು, ಮಾನವ ಮಿದುಳಿನ ಬಗ್ಗೆ ಸರಳವಾಗಿ ಕುತೂಹಲ ಹೊಂದಿರುವವರಿಗೆ ಈ ಪುಸ್ತಕವು ಜ್ಞಾನೋದಯ, ಸ್ಫೂರ್ತಿ ಮತ್ತು ಶಾಶ್ವತವಾದ ಪ್ರಭಾವವನ್ನು ನೀಡುತ್ತದೆ. ರೋಗಿಯೊಂದಿಗೆ ಕಥನದ ರೂಪದಲ್ಲಿ ಈ ಕೃತಿ  ಅನಾವರಣಗೊಂಡಿದೆ. ಪ್ರತಿ ಅಧ್ಯಾಯದಲ್ಲಿ ಕ್ಲಿನಿಕಲ್ ಚರ್ಚೆಗಳಿಗೆ ಮಾನವೀಯ ಸ್ಪರ್ಶ ನೀಡಲಾಗಿದೆ. ಪಾರ್ಶ್ವವಾಯು ನಿರ್ವಹಣೆಯಿಂದ ಪಾರ್ಕಿನ್ಸನ್ ಕಾಯಿಲೆ ಮತ್ತು ದೀರ್ಘಕಾಲದ ನೋವಿಗೆ ಹೇಗೆ ಪರಿಹಾರ ಎಂಬ ಕುರಿತು ಬೆಳಕು ಚೆಲ್ಲಲಾಗಿದೆ ಎಂದರು. 

ವೈದ್ಯರಷ್ಟೇ ಅಲ್ಲದೇ ಜನ ಸಾಮಾನ್ಯರಲ್ಲಿಯೂ ಈ ಕೃತಿ ಅರಿವು ಮೂಡಿಸಲಿದೆ. ವಿಮಾ ಕಂಪೆನಿಗಳು ರೋಗಿಯ ಚಿಕಿತ್ಸೆಗೆ ಹಣ ಮರುಪಾವತಿ ಮಾಡುತ್ತವೆ. ಆದರೆ  ತರುವಾಯ ರೋಗಿಯ ಬದುಕು ಹೇಗೆ?. ಕುಟುಂಬದ ಭವಿಷ್ಯ ಏನು?. ಹೇಗೆ ಬದುಕುತ್ತಾರೆ ಎಂಬೆಲ್ಲಾ ಅಂಶಗಳತ್ತ ಬೆಳಕು ಚೆಲ್ಲಲಾಗಿದೆ. ಚಿಕಿತ್ಸೆ ನಂತರವೂ ದೈಹಿಕವಾಗಿ ಸಮರ್ಥರವಲ್ಲವನ್ನು ಮುಖ್ಯವಾಹಿನಿಗೆ ತರುವ ಕುರಿತಂತೆಯೂ ಚರ್ಚಿಸಲಾಗಿದೆ. ಇಂತಹವನ್ನು ಸಮಾಜ ಹೇಗೆ ನೋಡುತ್ತದೆ. ನಾವು ಹೇಗೆ ಜನರನ್ನು ನೋಡಿಕೊಳ್ಳಬಹುದು. ಒಟ್ಟಿಗೆ ಕೆಲಸ ಮಾಡುವ, ಅವಕಾಶ ಕಲ್ಪಿಸುವ ವಾಸ್ತವಿಕತೆಯ ಕಥೆಗಳನ್ನು ಇದು ಹೇಳುತ್ತದೆ ಎಂದರು. 

ಡಾ. ಪ್ರತಿಭಾ ಶರಣ್ ಮಾತನಾಡಿ, ಪಾರ್ಶ್ವವಾಯು, ಡಿಸ್ಕ್ ಲೋನಿಯಾ, ಪಾರ್ಕಿಸನ್ ಸಮಸ್ಯೆಗಳು ಬಂದಲ್ಲಿ ಏನು ಮಾಡಬೇಕು ಎಂಬ ವಿಚಾರಗಳನ್ನು ಕೃತಿ ಒಳಗೊಂಡಿದೆ. ಅಪಘಾತದ ನಂತರ ನೆನಪಿನ ಶಕ್ತಿ ನಷ್ಟವಾಗಿ, ಕೆಲವೊಮ್ಮೆ ಪಾರ್ಶ್ವವಾಯುಗೆ ತುತ್ತಾದರೆ ಏನು ಮಾಡಬೇಕು ಎನ್ನುವುದರತ್ತಲೂ ಬೆಳಕು ಚೆಲ್ಲಿದೆ. ಜನ ಸಾಲ ಮಾಡಿ ಮದುವೆ, ಸಮಾರಂಭಗಳನ್ನು ಮಾಡುತ್ತಾರೆ. ಆದರೆ ಆರೋಗ್ಯ ಸಮಸ್ಯೆಗಳಿಂದ ದಿವ್ಯಾಂಗರಾದವರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತದೆ. ಇಂತಹವರಿಗೆ ಫಿಸಿಯೋಥೆರಪಿ ಮಾಡಿಸಿದರೆ ಅವರಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಮುಖ್ಯವಾಹಿನಿಗೆ ತರಲು ಇದರಿಂದ ಸಹಕಾರಿಯಾಗಲಿದೆ. ಈ ಕೃತಿ ಮಾರಾಟದಿಂದ ಬರುವಹಣವನ್ನು ಸ್ವಾಸ್ಥ್ಯ ಆರೋಗ್ಯ ಫೌಂಡೇಶನ್‌ ಮೂಲಕ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳಲಾಗುವುದು ಎಂದರು. 

ಕಾರ್ಯಕ್ರಮದಲ್ಲಿ ಡಾ. ವಸಂತಂ ರಾಜಶೇಖರನ್, ಡಾ. ದ್ವಾರಕಾನಾಥ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)