BELLARY : ಬಳ್ಳಾರಿಯ ವಿಜಯ ಕರ್ನಾಟಕದ ಪತ್ರಕರ್ತ ವೀರೇಶ್ ನಿಧನ -JOURNALIST VEERESH

VK NEWS
By -
0

ಬಳ್ಳಾರಿಯ ವಿಜಯ ಕರ್ನಾಟಕದ ಕಚೇರಿಯ ಉಪ ಸಂಪಾದಕ ವೀರೇಶ್ ಕಟ್ಟೆ ಮ್ಯಾಗಳ (42)ಹೃದಯಾಘಾತದಿಂದ ಇಂದು ಜಿಲ್ಲಾ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾರೆ. ಅವರಿಗೆ ಪತ್ನಿ ಇಬ್ಬರು ಪುತ್ರಿಯರಿದ್ದಾರೆ.

ಬಳ್ಳಾರಿಯಲ್ಲಿ ಪ್ರಜಾವಾಣಿ, ಈನಾಡು ಇಂಡಿಯಾದ ಅರೆ ಕಾಲಿಕ ವರದಿಗಾರರಾಗಿ ವೀರೇಶ್ ಸೇವೆ ಸಲ್ಲಿಸಿದ್ದರು

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಗ್ರಾಮಕ್ಕೆ ಸೇರಿದವರು

ನಾಳೆ (ಮೇ 13)ಬಳ್ಳಾರಿ ತಾಲೂಕಿನ ಬೇವಿನಹಳ್ಳಿಯ ರುದ್ರಭೂಮಿಯಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಲಿದೆ.

ಕೆಯುಡಬ್ಲ್ಯೂಜೆ ಸಂತಾಪ:

ಪತ್ರಕರ್ತ ವೀರೇಶ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ಸಂತಾಪ ವ್ಯಕ್ತಪಡಿಸಿದೆ. ವೀರೇಶ್ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ದೇವರು ಕರುಣಿಸಲಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Post a Comment

0Comments

Post a Comment (0)