ಹರಿದಾಸ ಮಿಲನ ಮತ್ತು ದಾಸೋಪಾಸನ, ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ 2020 ಕರೋನದ ವೇಳೆಯಲ್ಲಿ ದೇವಸ್ಥಾನಕ್ಕೆ, ಭಜನೆಗೆ ಎಲ್ಲೂ ಹೋಗದ ಪರಸ್ಥಿತಿಯಲ್ಲಿ ಮನೆಯಲ್ಲಿಯೇ ಹಿರಿಯರಿಗೆ ಕಿರಿಯರಿಗೆ ಹೀಗೆ ಎಲ್ಲ ವಯೋಮಿತಿ ಜನರು ಮನೆಯಲ್ಲಿಯೇ ಕುಳಿತು ದೇವರ ಸ್ಮರಣೆ ಮಾಡಲು ಈ ಎರಡು ವೇದಿಕೆಯನ್ನು ಡಾ.ಆರ್. ಪಿ . ಕುಲಕರ್ಣಿ ಸಾರಥ್ಯದಲ್ಲಿ ಸ್ಥಾಪಿಸಿ , ಆತ್ಮಸ್ಥೈರ್ಯದಿಂದ ಗಾಯನ ಸೇವೆ ಮಾಡುತ್ತಾ ಬಹಳಷ್ಟು ಜನ ಸದುಪಯೋಗ ಪಡಿಸಿಕೊಳ್ಳುತ್ತಿರುವ ವೇದಿಕೆ ಇದಾಗಿದೆ .
ಇದೇ ಮೇ 26, ಭಾನುವಾರ ಬೆಳಗ್ಗೆ 9.00 ಗಂಡೆಗೆ ಹರಿದಾಸ ಮಿಲನ ಮತ್ತು ದಾಸೋಪಾಸನ, ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ ಮೂರನೇ ವಾರ್ಷಿಕೋತ್ಸವ ವನ್ನು ಬೆಂಗಳೂರು ನಗರದ ಕತ್ರಿಗುಪ್ಪೆ ರಸ್ತೆಯ ಪೂರ್ಣಪ್ರಜ್ಞ ವಿದ್ಯಾಪೀಠ ಸಭಾಗೃಹದಲ್ಲಿ ಅಯೋಜಿಸಲಾಗಿದೆ . ಉಡುಪಿ ಪೇಜಾವರ ಶ್ರೀ ಅಧೋಕ್ಷಜ ಮಠ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯ, ಡಾ|| ಸತ್ಯಧ್ಯಾನಾಚಾರ್ಯ ಕಟ್ಟಿ, ಪ್ರಾಂಶುಪಾಲರು, ಶ್ರೀ ಜಯತೀರ್ಥ ವಿದ್ಯಾಪೀಠ, ಡಾ|| ಹೆಚ್. ಸತ್ಯನಾರಾಯಣಾಚಾರ್ಯ, ಪ್ರಾಂಶುಪಾಲರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ,ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.: ಹೆಚ್.ವಿ.ಗೌತಮ ,ಶ್ರೀ ವಿ.ಕೆ. ಹರಿದಾಸ , ಶ್ರೀ ಶ್ರೀಪಾದ ಸಿಂಗನಮಲ್ಲಿ, ಪಂಡಿತ ಶ್ರೀ ಪದ್ಮನಾಭ ವರಖೇಡಿ, ಶ್ರೀ ಸುರೇಶ ಕಲ್ಲೂರ, ಶ್ರೀಮತಿ ರಾಧಿಕಾ ಜೋಶಿ, ಶ್ರೀಮತಿ ವಾರುಣಿ ಅನಿಲ, ಶ್ರೀಮತಿ ಪೂರ್ಣಿಮಾ ಕುಲಕರ್ಣಿ, ಶ್ರೀಮತಿ ಪ್ರಿಯಾ ಪ್ರಾಣೇಶ ಹರಿದಾಸ ಹಾಗೂ ಸಮೂಹದ ಸದಸ್ಯರ ಉಪಸ್ಥಿಯಲ್ಲಿ ದಾಸಸಾಹಿತ್ಯದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ,ಪ್ರವಚನ, ಭರತ ನಾಟ್ಯ, ಸಂಗೀತ ಸೇವೆ ವಿವಿಧ ಕಾರ್ಯಕ್ರಮ ಜರುಗಲಿವೆ ಎಂದು ಆಯೋಜಕರಾದ ಡಾ . ಆರ್. ಪಿ. ಕುಲಕರ್ಣಿ,ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಿವರಗಳಿಗೆ : 8050436752