ಮತ್ತೆ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಲಿದೆಯಂತೆ!

VK NEWS
By -
0

 



 ಮಂಡ್ಯ, ಏ.04: ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಇದರ ಬೆನ್ನಲ್ಲೇ ಇಂದು(ಏ.04) ಮಂಡ್ಯದಲ್ಲಿ ಬಿಎಸ್​ ಯಡಿಯೂರಪ್ಪ ಹಾಗೂ ಗೋವಾ ಸಿಎಂ ಪ್ರಮೋದ್ ಸಾವಂತ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿ ಪ್ರಮೋದ್ ಸಾವಂತ್, ‘ಮೋದಿ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲೂ NDA ಗೆಲ್ಲುತ್ತೆ.  ಜೊತೆಗೆ ರಾಜ್ಯದಲ್ಲಿ ಮತ್ತೆ ಡಬಲ್​ ಇಂಜಿನ್​ ಸರ್ಕಾರ ಬರಲಿದೆ ಎಂದಿದ್ದಾರೆ.

ಇನ್ನು ಎನ್​ಡಿಎ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಬಡವರ ಪರ ಕೆಲಸ ಮಾಡಿದೆ. ಬಿಜೆಪಿ ವಿಕಸಿತದ ಮೇಲೆ ರಾಜಕಾರಣ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೋದಿ ಅವರ ಸಾಧನೆ. ನಾನು ಕಾಂಗ್ರೆಸ್​ನವರಿಗೆ ಸವಾಲು ಹಾಕುತ್ತೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವ ಸ್ಕೀಂ ತಂದಿದೆ. ರಾಜ್ಯದ ಜನ‌ ಬಿಜೆಪಿ ಜೆಡಿಎಸ್​ಗೆ ಮತ ಹಾಕಿ. ಡಬಲ್ ಇಂಜಿನ್ ನಿಂದ ಗೋವಾದಲ್ಲಿ ಅಭಿವೃದ್ಧಿ ‌ಆಗಿದೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ‌ಬಂದ ಮೇಲೆ ಅಭಿವೃದ್ಧಿ ‌ಸ್ಥಗಿತಗೊಂಡಿದೆ ಎಂದು ಕಿಡಿಕಾರಿದರು.


ಇದೇ ವೇಳೆ ಮಾತನಾಡಿದ ಬಿಎಸ್​ ಯಡಿಯೂರಪ್ಪ, ‘ಸಿದ್ದರಾಮಯ್ಯ ಮಾತಿಗೆ ಯಾವುದೇ ಬೆಲೆ ಕೊಡುವ ಅವಶ್ಯಕತೆ ಇಲ್ಲ ಸಿದ್ದರಾಮಯ್ಯ ವಿರುದ್ಧ ಬಿಎಸ್​ವೈ ವಾಗ್ದಾಳಿ ನಡೆಸಿದರು. ಇನ್ನು ಸರ್ಕಾರ ಬೀಳುತ್ತದೆ ಎಂದು ಈಗ ನಾನು ಹೇಳುವುದಿಲ್ಲ. ಮುಂದೆ ಏನು ಆಗುತ್ತದೆ ಕಾದು ನೋಡೋಣ. ಜೊತೆಗೆ ಸುಮಲತಾ ಅಂಬರೀಶ್ ಏ.6ರಂದು ಬಿಜೆಪಿ ಸೇರುತ್ತಾರೆ ಎಂದು ಸ್ಪಷ್ಟಪಡಿಸಿದರು

Post a Comment

0Comments

Post a Comment (0)