'ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭೀಕರ ಬರಗಾಲ. ಆಮೇಲೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕ್ಯಾಬಿನೆಟ್ನಲ್ಲಿ ಕೂತ್ರು. ಇಡೀ ರಾಜ್ಯದಲ್ಲೆಲ್ಲಾ ಮಳೆ ಬಂತು. ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ. ಬಿಜೆಪಿ ಸರ್ಕಾರ ಬಂದಾಗ ಮಳೆ. ಕಾಂಗ್ರೆಸ್ನವರ ದರಿದ್ರ ಕಾಲುಗುಣದಿಂದ ಬರಗಾಲ ಬಂದಿದೆ ಎಂದು ಕುಟುಕಿದರು.
ಜನರ ಹಣವನ್ನು ಕೊಡ್ಲಿಲ್ಲ ದ್ರೋಹಿಗಳು. ಬಿಜೆಪಿ ಬಂದ್ರೆ ರಾಜ್ಯ ಅಭಿವೃದ್ದಿಯಾಗುತ್ತೆ. ಕಳೆದ 10 ತಿಂಗಳಲ್ಲಿ ಎಲ್ಲಾದ್ರೂ ಕೆಲಸ ಪ್ರಾರಂಭ ಆಗಿದ್ಯಾ? ಹೆಂಗಸರಿಗೆ 2,000 ಕೊಡ್ತೀನಿ ಅಂದ್ರು ಮೋಸಗಾರ ಸಿದ್ದರಾಮಯ್ಯ. ಗಂಡಸರಿಗೆ ಎಣ್ಣೆ ಜಾಸ್ತಿ ಮಾಡಿದ್ರು. ಬಡವರ, ರೈತರ ವಿರೋಧಿ ಇಂಥ ಸರ್ಕಾರ ರಾಜ್ಯದಲ್ಲಿದೆ' ಎಂದು ಕಿಡಿಕಾರಿದರು.
ಮಂಡ್ಯದಲ್ಲಿ ಹನುಮ ಧ್ವಜ ಕಿತ್ತಾಕಿದವರು ಯಾರು..? ಇಂಥ ಕಾಂಗ್ರೆಸ್ ಅವರನ್ನು ಕಿತ್ತೊಗೆಯೋ ಕೆಲಸ ಮಾಡಬೇಕಿದೆ. ಸೋಮಣ್ಣ ವಸತಿ ಸಚಿವ ಆಗಿದ್ದಾಗ, ರಾಜ್ಯದಲ್ಲಿ ಮನೆ ಕಟ್ಟಿದ ಕೆಲಸ ಮಾಡಿದ್ರು. ಕಾಂಗ್ರೆಸ್ ನಾಯಕರು ಮನೆ ಹಾಳು ಮಾಡುವಂತ ಕೆಲಸ ಮಾಡವ್ರು ಎಂದು ಹರಿಹಾಯ್ದರು.
ರಾಮಮಂದಿರ ಕಟ್ಟೋಕೆ 100 ವರ್ಷ ಆಯ್ತು. ಯಾರು ಕಟ್ಟೋಕೆ ಆಗಿಲ್ಲ. ಮೋದಿನೇ ಬರಬೇಕಾಯ್ತು. ನಮ್ಮ ಬೆಂಬಲ ಯಾರಿಗೆ? ಮೋದಿಗೆ. ಕಾಂಗ್ರೆಸ್ ಕಾಶ್ಮೀರವನ್ನ ಬಿಟ್ಟುಬಿಟ್ರು. ಆದರೆ, ಮೋದಿ ನಮ್ಮದಾಗಿಸಿಕೊಂಡ್ರು. ರಾಹುಲ್ ಗಾಂಧಿ, ಮೋದಿಗೆ ಸರಿಸಮನಾಗಿ ನಿಲ್ಲೋಕೆ ಆಗುತ್ತಾ..? ಯಾವಾಗ ಫಾರಿನ್ಗೆ ಓಡೋಗ್ತಾರೋ ಗೊತ್ತಿಲ್ಲ.
ಎಂದು ಆರ್. ಅಶೋಕ್ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.