BENGALURU : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಮತ್ತು ಶ್ರೀ ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಮೋತ್ಸವದ ಅಂಗವಾಗಿ ವಿಶೇಷ ಅಭಿಷೇಕ ಉತ್ಸವ ಅಲಂಕಾರ ಭಕ್ತರಿಗೆ ನಿರಂತರವಾಗಿ ಪಾನಕ ಮಜ್ಜಿಗೆ ಕೋಸಂಬರಿ ಪ್ರಸಾದವು ವಿತರಣೆಯಾಯಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
ಭಕ್ತರು ಉತ್ಸವದ ಸೇವೆಯಲ್ಲಿ ಮತ್ತು ಶ್ರೀರಾಮೋತ್ಸವದ ಭಜನೆ ಯಲ್ಲಿ ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು .