ಶ್ರೀ ವ್ಯಾಸರಾಜ ಮಠದಲ್ಲಿ ಶ್ರೀವ್ಯಾಸಶ್ರೀಶ ಧಾರ್ಮಿಕ ಶಿಬಿರದ ಉದ್ಘಾಟನೆ

VK NEWS
By -
0

 ಶ್ರೀ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರ ಆದೇಶಾನುಸಾರ  ಸೋಸಲೆಯ ಪವಿತ್ರ ಸ್ಥಳವಾದ ಶ್ರೀ ವ್ಯಾಸರಾಜ ಮಠದಲ್ಲಿ  ಶ್ರೀವ್ಯಾಸಶ್ರೀಶ ಧಾರ್ಮಿಕ ಶಿಬಿರದ ಉದ್ಘಾಟನೆಯು ನೆರವೇರಿತು.

 ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸರಾದ ಮೈಸೂರಿನ ಶ್ರೀ ವಿಜಯೀಂದ್ರಾಚಾರ್ಯರು ಉಪಸ್ಥಿತರಿದ್ದರು.


ಶ್ರೀವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಶ್ರೀನಿಧಿ ಆಚಾರ್ಯ ಪ್ಯಾಟಿ ಮತ್ತು ಶ್ರೀಕಾಂತ ಕಳಸಾಪುರ ಆಚಾರ್ಯ ,ಪುಷ್ಕರಾಚರ್ಯರು ಶಿಬಿರದ ಉಸ್ತುವಾರಿವಹಿಸಿದ್ದರು.

 ಶಿಬಿರದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ "ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಆಧ್ಯಾತ್ಮ ಜ್ಞಾನದ ಕೊಡುಗೆ" ಎನ್ನುವ ವಿಷಯದಲ್ಲಿ ಶ್ರೀ ವಿಜಯೀಂದ್ರಾಚಾರ್ಯರು ಮತ್ತು  ಶ್ರೀನಿಧಿ ಪ್ಯಾಟಿ ಆಚಾರ್ಯರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ಅಂಭೃಣಿ ಗುರುಕುಲದ ವಿದ್ಯಾರ್ಥಿನಿಯರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷ ಭಾಷಣದಲ್ಲಿ ವಿಜಯೀಂದ್ರಾಚಾರ್ಯರು ಮಾತನಾಡಿ ಇಂದಿನ ಕಾಲದಲ್ಲಿ ಧಾರ್ಮಿಕ ಶಿಬಿರಗಳ ಆವಶ್ಯಕತೆ ಎನ್ನುವ ವಿಷಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಮನಮುಟ್ಟುವಂತೆ ತಿಳಿಸಿದರು. ಸೋಸಲೆಯ ನವೀಕರಣಗೊಂಡ ಕಟ್ಟಡದ ಭವ್ಯತೆಯನ್ನು ವರ್ಣಿಸಿ ಶ್ರೀಮಠದ ಅಭಿವೃದ್ಧಿಗೆ ಪರಮಪೂಜ್ಯ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಕೊಡುಗೆಯನ್ನು ಅವರು ಕೊಂಡಾಡಿದರು. 

ವಂದನಾರ್ಪಣೆಯನ್ನು ಮಾಡುತ್ತಾ ಶ್ರೀವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಶ್ರೀನಿಧಿ ಪ್ಯಾಟಿ ಆಚಾರ್ಯರು ಧಾರ್ಮಿಕ ಶಿಬಿರ ಮುಂತಾದ ಎಲ್ಲ ಯೋಜನೆಗೆ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿರುವ ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾದ ಡಾ. ಡಿ.ಪಿ ಮಧುಸೂಧನಾಚಾರ್ಯರಿಗೆ ವಂದನೆಗಳನ್ನು ಸಲ್ಲಿಸಿದರು. ಸೋಸಲೆ ವ್ಯಾಸರಾಜ ಮಠದ ವ್ಯವಸ್ಥಾಪಕರಾದ ಶ್ರೀಧರ್ ಹಾಗೂ ಮಠದ ಸಿಬ್ಬಂದಿಗಳ ಸಹಕಾರವನ್ನು ಸ್ಮರಿಸಿ ಅವರಿಗೆ ಶ್ರೀಪಾದಂಗಳವರ ಅನುಗ್ರಹವನ್ನು ಪ್ರಾರ್ಥಿಸಿದರು.

ಶಿಬಿರದಲ್ಲಿ ಶಿವಮೊಗ್ಗ ಬೆಂಗಳೂರು ಮೈಸೂರು ಮುಂತಾದ ಪ್ರದೇಶಗಳಿಂದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಸಂಧ್ಯಾವಂದನೆ, ದೇವಪೂಜಾ ಪದ್ಧತಿ ,ಸ್ತೋತ್ರಪಾಠ ಮುಂತಾದ ವಿಭಾಗದಲ್ಲಿ ಪಾಠಗಳನ್ನು ಶಿಬಿರದಲ್ಲಿ ನಡೆಸಲಾಗುತ್ತಿದೆ.

Post a Comment

0Comments

Post a Comment (0)