ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ (ವಜ್ರಕ್ಷೇತ್ರ)ದಲ್ಲಿ ಏಪ್ರಿಲ್ 26, ಶುಕ್ರವಾರ ಸಂಜೆ ಏರ್ಪಡಿಸಿದ್ದ "ಹರಿದಾಸ ಮಂಜರಿ" ಕಾರ್ಯಕ್ರಮದಲ್ಲಿ ಗಾನ ಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಮತ್ತು ಶ್ರೀಮತಿ ರಂಜಿತಾ ವಿಜಯ್ ಹಾಗೂ ಗುರುಗಳಾದ ಶ್ರೀಮತಿ ರಮ್ಯಾ ಸುಧೀರ್ ಇವರುಗಳು ಹರಿದಾಸರ ಕೀರ್ತನೆಗಳ ಗಾಯನ ಸೇವೆ ನಡೆಸಿಕೊಟ್ಟರು.
ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ ತಬಲಾ ವಾದನದಲ್ಲಿ ಶ್ರೀ ಸರ್ವೋತ್ತಮ ಸಾಥ್ ನೀಡಿದರು.
ದೇವಸ್ಥಾನದ ಮುಖ್ಯಸ್ಥರಾದ ಶ್ರೀ ವಾದಿರಾಜಾಚಾರ್ ಮತ್ತು ಶ್ರೀ ನರಹರಿ ಆಚಾರ್ ಅವರುಗಳು ಗುರುಗಳಿಗೆ, ಮಕ್ಕಳಿಗೆ ಹಾಗೂ ವಾದ್ಯ ಕಲಾವಿದರಿಗೆ ಪ್ರಶಸ್ತಿ ಪತ್ರ ಹಾಗೂ ಸ್ವಾಮಿಯ ಪ್ರಸಾದ ನೀಡಿದರು. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಕಿಕ್ಕಿರಿದು ನೆರೆದಿದ್ದರು.