ಸಚಿವ ರಾಮಲಿಂಗಾರೆಡ್ಡಿ ಮಗಳ ಗೆಲುವಿನ ರಣ ತಂತ್ರ ಫಲಿಸೀತೇ...?
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಈ ಬಾರಿ ನೇರ ನೇರ ಜಿದ್ದಾ ಜಿದ್ದಿನ ರಾಜಕೀಯ ರಣ ರಂಗವಾಗಿದೆ.ಕಾರಣ ಕಳೆದ 30 ವರ್ಷ ದಿಂದ ಈ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಂತೆ ಕಾಪಾಡಿಕೊಂಡು ಉಳಿಸಿಕೊಂಡು ಬರುತ್ತಿದೆ.! ಕಳೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿ ಪೈ ಪೋಟಿ ಕೊಟ್ಟಿತ್ತು ಆದರೆ ಈ ಬಾರಿಯಂತೆ ಈ ಪ್ರಮಾಣದಲ್ಲಿ ಸೆಡ್ಡು ಹೊಡೆದು ರಣ ಕಹಳೆ ಮೊಳಗಿಸಿದ್ದು ಇದೇ ಮೊದಲಭಾರಿ ಅಂದರೆ ತಪ್ಪಾಗಲಿಕ್ಕಿಲ್ಲ.
ಸೋಲಿಲ್ಲದ ಸರದಾರ,, ಅಭಿವೃದ್ಧಿ ಹರಿಕಾರ,, ಸರ್ವರಿಗೂ ಪ್ರಿಯರಾದ ಶಾಂತ ಸ್ವರೂಪದ ಸಚಿವ ರಾಮಲಿಂಗಾರೆಡ್ಡಿ ಇದುವರೆಗೂ ಯಾವುದೇ ಕಪ್ಪು ಚುಕ್ಕೆ ಇವರ ಮೇಲೆ ಇಲ್ಲ. ಅಷ್ಟೇ ಅಲ್ಲದೇ ಅವರ ತಂದೆಯವರ ಕಾಲದಿಂದಲೂ ಇಂದಿರಾ ಗಾಂಧಿ ಕುಟುಂಬದ ಪರವಾಗಿರುವ ಕಟ್ಟಾ ಕಾಂಗ್ರೆಸ್ ವ್ಯಕ್ತಿ ಯಾಗಿ ಪಕ್ಷ ದ ಹೈ ಕಮಾಂಡ್ ಮಟ್ಟದಲ್ಲಿ ಇದುವರೆಗೂ ಗುರುತಿಸಿ ಕೊಂಡಿದ್ದಾರೆ.
ಮಗಳು ಸೌಮ್ಯ ರೆಡ್ಡಿಯನ್ನು ಈಗ ತಮ್ಮ ಪ್ರಭಾವ ದಿಂದಲೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ದ ಅಭ್ಯರ್ಥಿ ಯನ್ನಾಗಿ ಕಣಕ್ಕೆ ನಿಲ್ಲಿಸುವುದರ ಮೂಲಕ ದೆಹಲಿ ರಾಜಕೀಯದಲ್ಲಿ ತಮ್ಮ ಶಕ್ತಿ ತೋರಿಸಲು ಸಜ್ಜಾಗಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾಕ್ಷೇತ್ರ. ಒಟ್ಟು ಮತದಾರರ ಸಂಖ್ಯೆ 23,17,472. ಪುರುಷರು 11,95,285. ಮಹಿಳೆಯರು 11,21,788, ಇತರೆ 399
ಒಟ್ಟಾರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಎಡೆಮುರಿ ಕಟ್ಟಲು ಕಾದಿರುವ ಕಾಂಗ್ರೆಸ ರಣತಂತ್ರ ಫಲಿಸಿ... ಸೌಮ್ಯ ಸ್ವಭಾವದ ಸೌಮ್ಯ ರೆಡ್ಡಿ ವಿಜಯ ಪತಾಕೆ ಹಾರಿಸು ವರೇ ಕಾದು ನೋಡೋಣ....
-ಸಂಪಾದಕ