ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ನದಾತರಿಗೆ ಮೋಸ; ಸಂಯುಕ್ತಾ ಪಾಟೀಲ್

VK NEWS
By -
0

ಬಾಗಲಕೋಟೆ :ಲೋಕಸಭಾ ಚುನಾವಣೆಯ ಕಾವು ತಾರಕಕ್ಕೇರಿದ್ದು, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು ಕೂಡ ಬಾದಾಮಿ ತಾಲೂಕಿನ ಕಟಗೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ನಡೆಸಿದ ಸಂಯುಕ್ತಾ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸಾಧಿಸುತ್ತಿರುವ ತಾರತಮ್ಯ ನೀತಿಯನ್ನು ಕಟುವಾಗಿ ಟೀಕಿಸಿದರು.

ರೈತರಿಗೆ ಬಲವಾಗಿ, ಬಡ ಜನರಿಗೆ ಶಕ್ತಿಯಾಗಿ ಕೆಲಸ ಮಾಡುವ ಆಸೆಹೊಂದಿದ್ದು , ನಿಮ್ಮೆಲ್ಲರ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಮನವಿ ಮಾಡಿದರು. ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿಗಳ ಮೂಲಕ ಅನ್ನದಾತರಿಗೆ ಮೋಸ ಮಾಡಿದೆ ಎಂದು ಸಂಯುಕ್ತ ಹೇಳಿದರು. ಬಾಗಲಕೋಟೆ ಜಿಲ್ಲೆಗೆ ಯುಕೆಪಿ ಸಮಸ್ಯೆ ಪರಿಹಾರ, ಯುವಕರಿಗೆ ಉದ್ಯೋಗ ಭದ್ರತೆ, ಬಾದಾಮಿ ಪ್ರವಾಸೋದ್ಯಮ ಅಭಿವೃದ್ಧಿ, ಟೆಕ್ಸ್ ಟೈಲ್ಸ್ ಉದ್ಯಮ ಅಭಿವೃದ್ಧಿಯನ್ನು ನಾನು ಮಾಡುತ್ತೇನೆ ಎಂದು ಸಂಯುಕ್ತ ಪಾಟೀಲ್ ಹೇಳಿದರು.

ರಾಜ್ಯದ ಜನರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ರಾಜ್ಯದ ಮುಖ್ಯಮಂತ್ರಿಗಳಾದಿಯಾಗಿ ಎಲ್ಲ ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿ ರಾಜ್ಯದ ಟ್ಯಾಕ್ಸ್ ಹಣ ಹಾಗೂ ಬರ ಪರಿಹಾರದ ಹಣದ ಕುರಿತು ಹೋರಾಟ ನಡೆಸಿದರು. ಆದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಸ್ಪಂದಿಸಿಲ್ಲ ಎಂದು ಕೈ ಅಭ್ಯರ್ಥಿ ಹುನಗುಂದ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.

ದಲಿತರ ಜೀವನ ದುಸ್ಥಿತಿಯಲ್ಲಿ ಇದೆ. ಕೇಂದ್ರ ಬಿಜೆಪಿ ಸರ್ಕಾರ ದಲಿತರ ಮೇಲಿನ ದೌರ್ಜನ್ಯಕ್ಕೆ ಯಾವುದೇ ರೀತಿ ಸ್ಪಂದನೆ ತೋರುತ್ತಿಲ್ಲ, ಸಬ್ ಕಾ ಸಾಥ್ ಸಬಾ ಕಾ ವಿಕಾಸ್ ಎನ್ನುವ ಪ್ರಧಾನಿಗಳು ಬರೀ ಮಾತಿನ ಶೂರರಾಗಿದ್ದರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದ ಬಾದಾಮಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಅವರು ನನ್ನ ತಂಗಿ ಸಂಯುಕ್ತಾ ಪಾಟೀಲ್ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಬಿ ಬಿ ಚಿಮ್ಮನಕಟ್ಟಿ, ಬ್ಲಾಕ್ ಅಧ್ಯಕ್ಷರು ಸಂಜು ಬರಗುಂಡಿ, ಟಿ ಎಸ್ ಮೋಕಾಶಿ, ದಾನಮ್ಮ ಪಾಟೀಲ, ಬಿ ಬಿ ಸೂಳಿಕೇರಿ, ರಾಜು ಜವಳಿ, ಬಿ ಎಸ್ ಹದ್ಲಿ, ಪಿ ಕೆ ಪಾಟೀಲ, ಶ್ರೀಕಾಂತ್ ಗುಡ್ಡದ, ಹಾಗೂ ಮಹೇಶ್ ತಾಳಂಪಲ್ಲಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Post a Comment

0Comments

Post a Comment (0)