ಡೋಝಿಯ ಸಂಪರ್ಕ ರಹಿತ ರಿಮೋಟ್ ಪೇಷೆಂಟ್ ಮಾನಿಟರಿಂಗ್ ವ್ಯವಸ್ಥೆಯ ಮೊದಲ ಆಸ್ಪತ್ರೆ

VK NEWS
By -
0

ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಡೋಝಿಯ ಸಂಪರ್ಕ ರಹಿತ ರಿಮೋಟ್ ಪೇಷೆಂಟ್ ಮಾನಿಟರಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಷ್ಟ್ರೋತ್ಥಾನ ಪರಿಷತ್ ಅಧೀನದ ಮೊದಲ ಆಸ್ಪತ್ರೆ ಎಂಬ ಮಹತ್ವದ ಸಾಧನೆ ಮಾಡಿದ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆ


'ಮೇಡ್-ಇನ್-ಇಂಡಿಯಾ' ತಂತ್ರಜ್ಞಾನವಾದ ಡೋಝಿ, ಐಸಿಯು ಹೊರಗಿನ ಎಲ್ಲಾ ರೋಗಿಗಳ ನಿಗಾ ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಸಂಭವನೀಯ ಆರೋಗ್ಯ ಕ್ಷೀಣಿಸುವಿಕೆಯನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ.

ಬೆಂಗಳೂರು, ಭಾರತ, 12 ಏಪ್ರಿಲ್ 2024: 162 ಹಾಸಿಗೆಗಳನ್ನು ಹೊಂದಿರುವ ಇಂಟಿಗ್ರೇಟೆಡ್ ಮಲ್ಟಿ-ಸ್ಪೆಷಾಲಿಟಿ ಟರ್ಷಿಯರಿ ಕೇರ್ ಹಾಸ್ಪಿಟಲ್ ಆಗಿರುವ ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಡೋಝಿಯ ಸುಧಾರಿತ ಎಐ ಆಧರಿತ ಸಂಪರ್ಕರಹಿತ, ಕಂಟಿನ್ಯೂಯಸ್ ಪೇಷೆಂಟ್ ಮಾನಿಟರಿಂಗ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅಳವಡಿಸಿಕೊಂಡಿರುವುದಾಗಿ ಘೋಷಿಸಿದೆ. ಈ ಹೊಸ ವ್ಯವಸ್ಥೆ ಅನುಷ್ಠಾನದ ಮೂಲಕ ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆಯು ರಾಷ್ಟ್ರೋತ್ಥಾನ ಪರಿಷತ್ತಿನೊಂದಿಗೆ ಸಂಯೋಜಿತವಾಗಿರುವ ದಕ್ಷಿಣ ಭಾರತದ ಆಸ್ಪತ್ರೆಗಳಲ್ಲಿಯೇ ಈ ವ್ಯವಸ್ಥೆ ಅಳವಡಿಸಿಕೊಂಡಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಗಳಿಸಿದೆ. ಆ ಮೂಲಕ ರೋಗಿಗಳ ಸುರಕ್ಷತೆ, ನಿರಂತರ ಕಾಳಜಿ ಮತ್ತು ರೋಗಿಗಳ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಲು "ಮೇಡ್ ಇನ್ ಇಂಡಿಯಾ' ತಂತ್ರಜ್ಞಾನವನ್ನು ಬಳಸಿಕೊಂಡಿದೆ.

ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ನಾನ್-ಐಸಿಯು ವಾರ್ಡ್ ಬೆಡ್‌ಗಳು ಮುಂದಿನ ಪೀಳಿಗೆಯ ಅತ್ಯಾಧುನಿಕ ಸಂಚಾರಿ- ಸಂಪರ್ಕಿತ ರೋಗಿಗಳ ನಿಗಾ ವಹಿಸುವ ವ್ಯವಸ್ಥೆ ಹೊಂದಿದೆ. ಜೊತೆಗೆ ಅದು ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ ವ್ಯವಸ್ಥೆಯನ್ನೂ ಹೊಂದಿದ್ದು, ಸಂಪರ್ಕರಹಿತವಾಗಿ ನಿರಂತರವಾಗಿ ರೋಗಿಗಳ ನಿಗಾವಹಿಸುವಿಕೆಯ ಕೆಲಸವನ್ನು ಮಾಡುತ್ತದೆ. ಡೋಝಿಯ ಉತ್ಪನ್ನವು ಕ್ಲೌಡ್-ಆಧರಿತವಾಗಿದೆ. ರೋಗಿಗಳ ಸುರಕ್ಷತೆಗಾಗಿ ಹಾಗೂ ಉತ್ತಮ ಚಿಕಿತ್ಸಾ ಫಲಿತಾಂಶ ದೊರಕಿಸಲು ಸಕಾಲಿಕ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರೋಗಿಯನ್ನು ನಿರಂತರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಅನುವು ಮಾಡಿಕೊಡುವ ಸೆಂಟ್ರಲ್ ಆಂಡ್ ರಿಮೋಟ್ ಮಾರಿಟರಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಆಸ್ಪತ್ರೆಯು 19 ಸಾಮಾನ್ಯ ವಾರ್ಡ್‌ಗಳು, 72 ಅರೆ-ಖಾಸಗಿ ವಾರ್ಡ್‌ಗಳು, 11 ತುರ್ತು ಚಿಕಿತ್ಸಾ ವಿಭಾಗಗಳು ಮತ್ತು 17 ಖಾಸಗಿ ವಾರ್ಡ್‌ಗಳನ್ನು ಹೊಂದಿದೆ. ಒಟ್ಟು 162 ಹಾಸಿಗೆಗಳನ್ನು ಹೊಂದಿದ್ದು, ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿದೆ.

ಹೃದಯ ಬಡಿತ, ಉಸಿರಾಟ ಸ್ಥಿತಿ, ರಕ್ತದೊತ್ತಡ, ಎಸ್‌ಪಿಓ2 ಮಟ್ಟಗಳು, ಟೆಂಪರೇಚರ್ ಮತ್ತು ಇಸಿಜಿಯಂತಹ ರೋಗಿಗಳ ಪ್ರಮುಖ ಆರೋಗ್ಯ ಅಂಶಗಳನ್ನು ದೂರದಿಂದಲೇ ನಿಗಾ ವಹಿಸುವ ಸೌಲಭ್ಯವನ್ನು ಡೋಝಿ ಆರೋಗ್ಯ ಕಾರ್ಯಕರ್ತರಿಗೆ ಒದಗಿಸುತ್ತದೆ. ಡೋಝಿಯ ನವೀನ ತಂತ್ರಜ್ಞಾನವು ರೋಗಿಗಳ ಸುರಕ್ಷತೆ, ಚಿಕಿತ್ಸಾ ಫಲಿತಾಂಶಗಳು ಮತ್ತು ಕಾರ್ಯಾಚರಣೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಸ್ವತಂತ್ರ ಸಲಹಾ ಸಂಸ್ಥೆಯಾದ ಸತ್ತ್ವ ನಡೆಸಿದ ಸಂಶೋಧನೆ ಪ್ರಕಾರ ಪ್ರತೀ ~ 100 ಡೋಝಿ ಸಂಪರ್ಕಿತ ಹಾಸಿಗೆಗಳು ~ 144 ಜೀವಗಳನ್ನು ರಕ್ಷಿಸಬಹುದಾಗಿದೆ ಮತ್ತು ~ ಶುಶ್ರೂಷಕರ 80%ರಷ್ಟು ಸಮಯವನ್ನು ಉಳಿಸುತ್ತದೆ ಮತ್ತು ಐಸಿಯು ಎಎಲ್ಓಎಸ್ ಅನ್ನು ~ 1.3 ದಿನಗಳವರೆಗೆ ಕಡಿಮೆ ಮಾಡುತ್ತದೆ.

ಬೆಂಗಳೂರಿನ ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಐಸಿಯು ಮತ್ತು ಇಆರ್‌ನ ಅನೆಸ್ತೇಷಿಯಾಲಜಿ ಎಚ್‌ಒಡಿ ಡಾ. (ಕರ್ನಲ್) ಆನಂದ್ ಶಂಕರ್ ಮಾತನಾಡಿ, "ಆರೋಗ್ಯ ಸೇವಾ ಕ್ಷೇತ್ರವು ನಿರಂತರವಾಗಿ ರೂಪಾಂತರಕ್ಕೆ ಒಳಗಾಗುತ್ತಿರುವುದರಿಂದ ಆರೋಗ್ಯ ಸೇವೆ ಪೂರೈಕೆದಾರರು ರೋಗಿಗಳಿಗೆ ಅತ್ಯುತ್ತಮ ಆರೈಕೆ ಒದಗಿಸಲು ಅತ್ಯಾಧುನಿಕ ಸಾಧನಗಳಿಗೆ ಹೊಂದಿಕೊಳ್ಳುವುದು ಮತ್ತು ಅವುಗಳನ್ನು ಹೊಂದುವುದು ಅವಶ್ಯವಾಗಿದೆ. ಉತ್ತಮ-ಗುಣಮಟ್ಟದ ಆರೈಕೆಯನ್ನು ಒದಗಿಸುವ ಮತ್ತು ರೋಗಿಗಳ ಚಿತಿಕ್ಸೆ ಫಲಿತಾಂಶಗಳನ್ನು ಸುಧಾರಿಸುವ ನಮ್ಮ ಉದ್ದೇಶಕ್ಕೆ ಪೂರಕವಾಗಿ 'ಮೇಡ್ ಇನ್ ಇಂಡಿಯಾ' ಸಂಪರ್ಕರಹಿತ, ನಿರಂತರ ರೋಗಿಗಳ ನಿಗಾ ವಹಿಸುವಿಕೆ ಪರಿಹಾರೋತ್ಪನ್ನವಾದ ಡೋಝಿ ಜೊತೆಗಿನ ಪಾಲುದಾರಿಕೆ ಸೂಕ್ತವಾಗಿ ಹೊಂದಿಕೊಂಡಿದೆ. ಡೋಝಿ ಜೊತೆಗೆ ಈ ಪ್ರಯಾಣದ ಭಾಗವಾಗಲು ನಮಗೆ ಸಂತೋಷವಿದೆ" ಎಂದು ಹೇಳಿದರು. 

ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಆತ್ಮಾರಾಮ್ ಡಿ ಸಿ ಡೋಝಿ ತಂತ್ರಜ್ಞಾನದ ಅಳವಡಿಕೆಯ ಕುರಿತು ಮಾತನಾಡಿ, "ಜಯದೇವ್ ಸ್ಮಾರಕ ಆಸ್ಪತ್ರೆಯು 162 ಹಾಸಿಗೆಗಳ ಇಂಟಿಗ್ರೇಟೆಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಸಮಾಜದ ಎಲ್ಲಾ ವರ್ಗಗಳ ಜನರಿಗೆ ಕೈಗೆಟುಕುವ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ಕ್ಲೌಡ್-ಆಧರಿತ ತಂತ್ರಜ್ಞಾನದಿಂದಾಗಿ ನಮ್ಮ ವೈದ್ಯರು ತಮ್ಮ ರೋಗಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದೂರದಿಂದಲೇ ನಿಗಾವಹಿಸಬಹುದಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಸಲಹೆಯನ್ನು ನೀಡಬಹುದಾಗಿದೆ " ಎಂದು ಹೇಳಿದರು.

ಬೆಂಗಳೂರಿನ ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಆಡಳಿತಾಧಿಕಾರಿ ಡಾ. ಶೈಲಾ ಹೆಚ್ ಎನ್, "ನಮ್ಮ ರೋಗಿಗಳ ಆರೈಕೆಯಲ್ಲಿ ಡೋಝಿಯ ಅನುಷ್ಠಾನವು ಆರೋಗ್ಯ ಸೇವೆ ಒದಗಿಸುವಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವ ನಮ್ಮ ಬದ್ಧತೆಯನ್ನು ತೋರಿಸಿಕೊಟ್ಟಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ನಮ್ಮ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೋಗ್ಯ ಸೇವೆ ಒದಗಿಸುವ ನಮ್ಮ ದೃಷ್ಟಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದರು.

"ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಂತಹ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಕೈಜೋಡಿಸುವುದಕ್ಕೆ ನಮಗೆ ಹೆಮ್ಮೆ ಇದೆ. ಏಕೆಂದರೆ ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಮತ್ತು ಚಿಕಿತ್ಸಾ ಫಲಿತಾಂಶಗಳು ಮತ್ತು ಶುಶ್ರೂಷೆಯ ದಕ್ಷತೆಯನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಡೋಝಿ ಸಿಇಓ ಮತ್ತು ಸಹ ಸಂಸ್ಥಾಪಕರಾದ ಮುದಿತ್ ದಂಡವಾಟೆ ಹೇಳಿದ್ದಾರೆ.

Post a Comment

0Comments

Post a Comment (0)