ತಮಿಳುನಾಡಿನ ಹೊಸೂರಿನ ಚಂದ್ರಚೂಡ ಈಸ್ವರ ದೇವಾಲಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಈ ದೇವಾಲಯವು ಹೊಸೂರಿನ ಬೆಟ್ಟದ ಮೇಲೆ ಇದೆ. ಈ ಬೆಟ್ಟ ಅಂತಹ ಎತ್ತರ ಅಥವಾ ಕಡಿದಾಗಿ ಇಲ್ಲ.ಈ ದೇವಾಲಯಕ್ಕೆ ಶಿವ ಪಾರ್ವತಿ ಯರ ಆಗಮನದ ಕುರಿತು ಪೌರಾಣಿಕ ಕಥೆ ಕೂಡ ಇದೆ.ಇಲ್ಲಿ ಪಾರ್ವತಿ ದೇವಿಯು ಮರಕಥ ಅಂಬಾಲ್ ಎಂಬ ಹೆಸರಿನಲ್ಲಿ ಪೂಜೆ ಮಾಡ ಲ್ಪಡುತ್ತಿದ್ದಾಳೆ.
ಈ ದೇವಸ್ಥಾನವು ಚೋಳರ ಕಾಲದಲ್ಲಿ ಕಟ್ಟಲ್ಪಟ್ಟಿದೆ ಎನಿಸುತ್ತದೆ.
ಇಲ್ಲಿ ಪ್ರತಿ ವರುಷ ಮಾರ್ಚ್ ತಿಂಗಳ ಹುಣ್ಣಿಮೆ ಅಂದರೆ ಹೋಲಿ ಹುಣ್ಣಿಮೆಯಂದು ರಥೋತ್ಸವ ಅಥವಾ ಕಾರ್ ಹಬ್ಬ ಎಂಬ ಹೆಸರಿನಲ್ಲಿ ತೇರು ನಡೆಯುತ್ತದೆ.ರಥ ಏರುವ ಸ್ವಾಮಿಗೆ ಹರಳುಉಪ್ಪು ಹಾಗೂ ಬಾಳೆಹಣ್ಣು ಎಸೆಯುತ್ತಾರೆ.
ನಂತರ ಹೊಸೂರು ದಾಟುವಾಗ ಸಿಕ್ಕುವ ಕೆರೆಗೆ ಜನಗಳು ಬಾಳೆಹಣ್ಣು ಮಕ್ಕಳ
ಕೈಲಿ ಎಸೆಯುತ್ತಾರೆ.ಹೀಗೆ ಮಾಡಿದರೆ ಮಕ್ಕಳ ಹಠ ಕಡಿಮೆ ಆಗುವುದು ಎಂದು ನಂಬಿಕೆ ಇದೆ.
ಇನ್ನು ದೇವಾಲಯಕ್ಕೆ ಬರುವ ಭಕ್ತರು ದೇವರ ವಿಗ್ರಹ ಒಂದಕ್ಕೆ ತಮ್ಮ ಬಟ್ಟೆಯ ನೂಲನ್ನು ತೋರಿಸಿ ಹಾರಿ ಬಿಡುತ್ತಾರೆ.ಹಾಗೆಯೇ ಇಲ್ಲಿನ ಶಿವಲಿಂಗದ ಮೇಲೆ ಹಬ್ಬವೊಂದರ ದಿನ ಸೂರ್ಯ ನ ಕಿರಣಗಳು ನೇರವಾಗಿ ಬೀಳುತ್ತವೆ ಎನ್ನುತ್ತಾರೆ.
ಕಾರ್ ಹಬ್ಬದ ದಿನ ಅಕ್ಕ ಪಕ್ಕದ ಊರಿನ ಜನ ಸೇರುತ್ತಾರೆ
ಆ ದಿನ ಭೋಜನದ.ವ್ಯವಸ್ಥೆ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಸಿಬ್ಬಂದಿಗಳನ್ನು ಸಂಪರ್ಕಿಸಿ
ರಾಧಿಕಾ ಜಿ ಎನ್
7019990492