ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸುಬ್ರಮಣ್ಯ ನಗರದ ಸಂಗೊಳ್ಳಿ ರಾಯಣ್ಣ ಪಾರ್ಕ್ ನಲ್ಲಿಂದು ಬೆಳಿಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಂ. ವಿ.ರಾಜೀವ್ ಗೌಡ ಪ್ರಚಾರ ಕಾರ್ಯವನ್ನು ಆರಂಭಿಸಿ, ಪಾರ್ಕ್ನ ವಾಯುವಿಹಾರಿಗಳ ಜೊತೆ ಹೆಜ್ಜೆ ಹಾಕಿ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿ, ಈ ಬಾರಿಯ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕೋರಿದರು.
ಈ ಸಂಧರ್ಭದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮುಖಂಡರು ಶ್ರೀ ಅನೂಪ್ ಅಯ್ಯಂಗಾರ್, ಮಾಜಿ ಮೇಯರ್ ಶ್ರೀ ಜೆ. ಹುಚ್ಚಪ್ಪ, ಶ್ರೀ ಜೆ. ಗಿರೀಶ್ ಲಕ್ಕಣ್ಣ, ಶ್ರೀ ವಿಜಯ್ ಮುಲಗುಂದ್ ರವರೊಂದಿಗೆ ವಾರ್ಡ್ ಅಧ್ಯಕ್ಷರುಗಳಾದ ಮಹೇಶ್, ಗೋಪಿ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಪಕ್ಷದ ಇತರೆ ಮುಖಂಡರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.