ಸಾವಿರಕ್ಕೂ ಅಧಿಕ ಅನಾಥ ಶವಗಳನ್ನು ಸಂಸ್ಕಾರ ಮಾಡಿ ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ಆಶಾ.ವಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವಿಜಯ ಮಹಲ್ ವತಿಯಿಂದ ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವವಿಸಲಾಯಿತು.
ಲಯನ್ ಪ್ರೇಮಾ ಮೋಹನ್, ಫಸ್ಟ್ ವೈಸ್ ಡೈರೆಕ್ಟರ್ ಗೌವರ್ನರ್ ಲಯನ್ ಎನ್. ಮೋಹನ್ ಕುಮಾರ್, ಕಾರ್ಯದರ್ಶಿ ಲಯನ್ ಆಶಾ ರವಿ ಕುಮಾರ್ ಹಾಗೂ ಖಜಾಂಚಿ ಲಯನ್ ರವಿಕುಮಾರ್ ಮಕ್ರನ್ ಅವರು ಸಮಾಜ ಸೇವಕಿ ಆಶಾ ವಿ ಅವರಿಗೆ ಸಾಲು ಹೊದೆಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.